ಬೆಂಗಳೂರು,ಫೆ,23,2020(www.justkannada.in): ಪಾಕ್ ಪಾಕಿಸ್ತಾನ ಪರ ಅಮೂಲ್ಯ ಘೋಷಣೆ ಪ್ರಕರಣ ಸಂಬಂಧ ಇಂತವರಿಗೆ ಗುಂಡಿಕ್ಕುವ ಕಾನೂನು ತರಲು ಪ್ರಧಾನಿ ಮೋದಿಗೆ ಮನವಿ ಮಾಡ್ತೇನೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ತಿಳಿಸಿದರು.
ಚಿತ್ರದುರ್ಗದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಬಿಸಿ ಪಾಟೀಲ್, ದೇಶ ವಿರೋಧಿ ಘೋಷಣೆ ಕೂಗಿದರೆ ಗುಂಡಿಕ್ಕುವ ಕಾನೂನು ತರಬೇಕು. ದೇಶದ ಅನ್ನ, ನೀರು, ಗಾಳಿ ಸೇವಿಸಿ ಬಳಿಕ ಇದೇ ದೇಶದ ವಿರೋಧವಾಗಿ ಘೋಷಣೆ ಕೂಗುವುದು ಸರಿಯಲ್ಲ. ಗುಂಡಿಕ್ಕುವ ಕಾನೂನು ತರಲು ಪ್ರಧಾನಿ ಮೋದಿಯವರಿಗೆ ಮನವಿ ಮಾಡುತ್ತೇನೆ ಎಂದರು.
ಶಾಸಕ ಮಹೇಶ್ ಕುಮಟಳ್ಳಿಯವರು ಕೂಡ ತ್ಯಾಗ ಮಾಡಿ ಬಂದವರು. ಅವರಿಗೂ ಸೂಕ್ತ ಸ್ಥಾನಮಾನ ಸಿಗಬೇಕು. ರಮೇಶ್ ಜಾರಕಿಹೊಳಿ ರಾಜೀನಾಮೆ ಹೇಳಿಕೆ ಅವರ ವೈಯಕ್ತಿಕವಾದದ್ದು. ಸೋತವರಿಗೆ ಜುಲೈ ವೇಳೆಗೆ ಸೂಕ್ತ ಸ್ಥಾನಮಾನ ನೀಡುವ ಭರವಸೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಮಾಜಿ ಸಿಎಂ ಸಿದ್ಧರಾಮಯ್ಯ ಕಾಲೆಳೆದ ಸಚಿವ ಬಿ.ಸಿ ಪಾಟೀಲ್, ನಮ್ಮಿಂದಲೇ ಅವರಿಗೆ ವಿಪಕ್ಷ ನಾಯಕನ ಸ್ಥಾನ ಸಿಕ್ಕಿದೆ. ನಮ್ಮನ್ನ ಅವರು ನೆನೆಸಿಕೊಳ್ಳಬೇಕು. ಅವರಿಗೆ ನಮ್ಮ ಬಗ್ಗೆ ಒಳಗೇ ಪ್ರಿತಿ ಇರುತ್ತದೆ. ವಿಪಕ್ಷ ನಾಯಕನೆಂಬ ಕಾರಣಕ್ಕೆ ಮಾತನಾಡುತ್ತಾರೆ ಎಂದು ಟಾಂಗ್ ನೀಡಿದರು.
Key words: Pro-Pak –declaration- case-shoot -appeals – Prime Minister- Modi –minister –bc patil