ಮೈಸೂರು, ಜೂ.08, 2019 : (www.justkannada.in news) : ನಗರದ ಅತ್ಯಂತ ಪುರಾತನ ಮರವೆಂದೇ ಹೆಸರು ಪಡೆದಿರುವ ‘ ದೊಡ್ಡಾಲದಮರ ‘ ಇದೀಗ ಹಚ್ಚ ಹಸಿರಿನಿಂದ ನಳನಳಿಸುತ್ತಿದೆ. ಇದಕ್ಕೆ ಕಾರಣ ಕಳೆದ ಕೆಲ ದಿನಗಳಿಂದ ಮೈಸೂರಿನಲ್ಲಿ ಸುರಿಯುತ್ತಿರುವ ಮಳೆ.
ಮೈಸೂರು-ತಿ.ನರಸೀಪುರ ರಸ್ತೆ ಮೂಲಕ ಸಾಗಿದರೆ ರಸ್ತೆ ಬದಿಯಲ್ಲೇ ಆಕರ್ಷಕವಾದ ಈ ದೊಡ್ಡಾಲದ ಮರ ಕಾಣಿಸುತ್ತದೆ. ನಿಸರ್ಗವೇ ಛತ್ರಿಯನ್ನು ನಿರ್ಮಿಸಿದೆಯೇನೋ ಎಂಬಂತೆ ಭಾಸವಾಗುವಂತಿದೆ ಈ ಆಲದ ಮರ. ಬೆಂಗಳೂರಿನ ಕೆಂಗೇರಿ ಸಮೀಪದ ದೊಡ್ಡ ಆಲದ ಮರವನ್ನು ಹೊರತು ಪಡಿಸಿದರೆ ಇದೇ ಅತ್ಯಂತ ಎರಡನೇ ದೊಡ್ಡ ಆಲದ ಮರ. ಅಂದಾಜು ಒಂದುವರೆ ಎಕರೆ ಪ್ರದೇಶದ ವಿಸ್ತೀರ್ಣದಲ್ಲಿ ಮರ ಹರಡಿಕೊಂಡಿದೆ.
ಸುಮಾರು 300 ವರ್ಷಗಳ ಇತಿಹಾಸ ಹೊಂದಿರುವ ಈ ಆಲದ ಮರ ಪಾರಂಪರಿ ಮರ ವೆಂದು ಗುರುತಿಸಲ್ಪಟ್ಟಿದೆ. ಈ ಮರದ ಬಳಿಯೇ ಅನೇಕ ಸಿನಿಮಾಗಳ ಚಿತ್ರೀಕರಣ ಸಹ ನಡೆದಿದೆ. ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಾಬಾ ಸಿನಿಮಾ, ಅಮೀರ್ ಖಾನ್ ನಟನೆಯ ರಾಜ ಹಿಂದೂಸ್ತಾನಿ ಸೇರಿದಂತೆ ಅನೇಕ ಸ್ಯಾಂಡಲ್ ವುಡ್ ಸಿನಿಮಾಗಳು ಇಲ್ಲಿ ಶೂಟಿಂಗ್ ನಡೆಸಿವೆ.
ಪರಿಣಾಮ ಈ ಮರದ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಳಗೊಂಡಿತು. ಬಾಹ್ಯ ಬೇರುಗಳನ್ನು ಕಿತ್ತು ಹಾಕುತ್ತಿದ್ದ ಕಾರಣ ಒಂದು ರೀತಿಯಲ್ಲಿ ಇದು ಮರಕ್ಕೂ ಮುಳುವಾಗಿತ್ತು. ಆದರೆ ಇದೀಗ ವರುಣನ ಕೃಪೆಯಿಂದ ದೊಡ್ಡಾಲದ ಮರ ಮತ್ತೆ ನಳನಳಿಸುತ್ತಿದೆ. ‘ ಹಸಿರು ಛತ್ರಿ ‘ ಕೈ ಬಿಸಿ ಬಾ ಅತಿಥಿ ಎಂದು ಕರೆಯುತ್ತಿದೆ.
ಚಿತ್ರ ಕೃಪೆ : ಪಿ.ಜೆ.ರಾಘವೇಂದ್ರ, ಮೈಸೂರು
——
Probably one of the largest trees in the country, this ‘heritage’ banyan tree (Dodda aladamara) located on T. Narasipur Road near Varuna tank Mysore.
People from surrounding areas and neighboring districts are arriving in hordes to watch and picture nature’s wonder. During the Dasara celebrations, the place received the maximum number of tourists. However, the tree is now facing a threat as people who visit it are cutting the aerial roots.
This Great Banyan Tree has featured in around 30 films, including the popular flick Baba starring superstar Rajnikanth and the old Aamir Khan starrer Raja Hindustani.