ಹುಬ್ಬಳ್ಳಿ,ಜನವರಿ,2,2023(www.justkannada.in): ನೋಟ್ ಬ್ಯಾನ್ ನಿಂದ ಕಾಂಗ್ರೆಸ್ ಗೆ ಸಮಸ್ಯೆಯಾಗಿತ್ತು. ಹೀಗಾಗಿ ಕಾಂಗ್ರೆಸ್ ನವರು ಕೋರ್ಟ್ ಗೆ ಹೋಗಿದ್ದರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದರು.
ಕೇಂದ್ರ ಸರ್ಕಾರದ ನೋಟ್ ಅಮಾನ್ಯೀಕರಣ ಕ್ರಮವನ್ನ ಸುಪ್ರೀಂಕೋರ್ಟ್ ಎತ್ತಿಹಿಡಿದ ಹಿನ್ನೆಲೆ ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕೇಂದ್ರಕ್ಕೆ ನೋಟ್ ಬ್ಯಾನ್ ಮಾಡುವ ಅಧಿಕಾರವಿದೆ. ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ. ಕಾಂಗ್ರೆಸ್ ನವರು ಕಪ್ಪು ಹಣ ಇಟ್ಟಿದ್ದರು. ಹೀಗಾಗಿ ನೋಟ್ ಬ್ಯಾನ್ ನಿಂದ ಕಾಂಗ್ರೆಸ್ ನವರಿಗೆ ತೊಂದರೆಯಾಯಿತು. ಹೀಗಾಗಿ ಕೋರ್ಟ್ ಗೆ ಹೋಗಿದ್ದರು ಎಂದರು.
ನಂದಿನಿ ಅಮುಲ್ ವಿಲೀನ ಮಾಡಿದ್ರೆ ಬಿಜೆಪಿಗೆ ಬೆಂಕಿ ಬೀಳುತ್ತೆ ಎಂದಿದ್ದ ಹೆಚ್.ಡಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ –ಜೆಡಿಎಸ್ ಗೆ ಬೆಂಕಿ ಹಚ್ಚೋದೆ ಕೆಲಸ. ಬೆಂಕಿಹಚ್ಚಿಯೇ ಆಡಳಿತ ಮಾಡಿದರು ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವ ಇಲ್ಲದ ಪಾರ್ಟಿ. ಕಾಂಗ್ರೆಸ್ ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಏನಾಗಿದೆ ಎಂದು ನೋಡಿದ್ದೇವೆ. ಜೆಡಿಎಸ್ ಗೆ ರಾಜ್ಯದಲ್ಲಿ 27 ರಿಂದ 28 ಸ್ಥಾನ ಬಿಟ್ಟರೇ ದೇಶದಲ್ಲಿ ಅಸ್ತಿತ್ವ ಇಲ್ಲ ಎಂದು ಟೀಕಿಸಿದರು.
Key words: Problem – Congress – note ban-Union Minister -Prahlad Joshi