ಆಕ್ಸಿಜನ್ ಸರಬರಾಜು ಆಗದಿದ್ದರೆ ಸಮಸ್ಯೆ: ಮೈಸೂರು ಡಿಸಿ ರೋಹಿಣಿ ಸಿಂಧೂರಿ ಆತಂಕ…

ಮೈಸೂರು,ಏಪ್ರಿಲ್,27,2021(www.justkannada.in): ಆಕ್ಸಿಜನ್ ಸರಬರಾಜು ಆಗದಿದ್ದರೆ ಇನ್ನು ಎರಡು ಮೂರು‌ ದಿನದಲ್ಲಿ ಸಮಸ್ಯೆಯಾಗಲಿದೆ ಎಂದು  ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆತಂಕ ವ್ಯಕ್ತಪಡಿಸಿದ್ದಾರೆ.jk

ಬೆಡ್ ಮತ್ತು ಆಕ್ಸಿಜನ್ ಕೊರತೆ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಮೈಸೂರು ಡಿಸಿ ರೋಹಿಣಿ ಸಿಂಧೂರಿ, ಆಕ್ಸಿಜನ್ ಸರಬರಾಜು ಆಗದಿದ್ದರೆ ಇನ್ನು ಎರಡು ಮೂರು‌ ದಿನದಲ್ಲಿ ಸಮಸ್ಯೆಯಾಗಲಿದೆ. ಹೊಸ ಪ್ಲ್ಯಾಂಟ್‌ ಗೆ ಅನುಮತಿ ಸಿಕ್ಕಿದೆ. ಆದರೆ ಅದಕ್ಕೆ ಕನಿಷ್ಠ 25 ದಿನ ಬೇಕು. ನಮಗೆ ತುರ್ತಾಗಿ ಪರ್ಯಾವಾಗಿ ಆಕ್ಸಿಜನ್ ಬೇಕಾಗಿದೆ. ಸರ್ಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ. ವಾರಾಂತ್ಯದಲ್ಲಿ 50 ವೆಂಟಿಲೇಟರ್ ನೀಡುವ ಭರವಸೆ ಸರ್ಕಾರ ನೀಡಿದೆ ಎಂದರು.

ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಡ್ ಇಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಬೆಡ್ ಇದ್ದು, ವಾರಾಂತ್ಯದಲ್ಲಿ ಮತ್ತಷ್ಟು ವೆಂಟಿಲೇಟರ್ ಬೆಡ್‌ ಗಳು ಸಿಗಲಿವೆ ಎಂದು ಡಿಸಿ ರೋಹಿಣಿ ಸಿಂಧೂರಿ ತಿಳಿಸಿದರು.problem - oxygen - not supplied-Mysore DC- Rohini Sindhuri- Anxiety.

ಮೈಸೂರಿನನಲ್ಲಿ ಒಂದೇ ದಿನ 1500 ಪಾಸಿಟಿವ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿ ರೋಹಿಣಿ ಸಿಂಧೂರಿ,  ಅದು‌ ಹಳೆಯ ಅಂಕಿ ಅಂಶಗಳೆಲ್ಲಾ ಸೇರಿ ನೀಡಿದ ಒಟ್ಟು ಪಾಸಿಟಿವ್. ನಾವು 700 ರ ಆಸುಪಾಸಿನಲ್ಲಿ ಇದ್ದೇವೆ. ಅಂಕಿ ಅಂಶಗಳು ಎರಡು ದಿನದು ಸೇರಿದಾಗ ಈ ರೀತಿ ಹೆಚ್ಚಾದಂತೆ ಕಾಣುತ್ತದೆ. ಸಾವಿರ ದಾಟಿದೆ ಎಂದು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.

Key words: problem – oxygen – not supplied-Mysore DC- Rohini Sindhuri- Anxiety.