ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಪತ್ರಕರ್ತ ರವೀಂದ್ರ ಭಟ್ ಗೆ ರಾಜ್ಯಮಟ್ಟದ ಕನಕಶ್ರೀ ಪ್ರಶಸ್ತಿ

ಮೈಸೂರು,ಡಿಸೆಂಬರ್,04,2020(www.justkannada.in) : ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹಾಗೂ ಪ್ರಜಾವಾಣಿ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಅವರಿಗೆ ರಾಜ್ಯಮಟ್ಟದ ಕನಕಶ್ರೀ ಪ್ರಶಸ್ತಿಯನ್ನು ವಿರೋಧಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಪ್ರದಾನ ಮಾಡಿದರು.

logo-justkannada-mysoreಶುಕ್ರವಾರ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಕರ್ನಾಟಕ ರಾಜ್ಯಗಳ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ದೆಹಲಿ, ಕರ್ನಾಟಕ ಘಟಕದ ವತಿಯಿಂದ ಆಯೋಜಿಸಿದ್ದ ಸಂತಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಕನಕದಾಸರ ಪ್ರತಿಮೆಗೆ ಪುಷ್ಪಾರ್ಚನೆಗೈದು ಗೌರವ ಅರ್ಪಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಕನಕಶ್ರೀ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಿದರು.

Prof G.Hemant Kumar-journalist-Ravindra Bhat-State-Level-Kanakashree-Award

8 ಮಂದಿಗೆ ಜಿಲ್ಲಾ ಮಟ್ಟದ ಕನಕಶ್ರೀ ಪ್ರಶಸ್ತಿ ಪ್ರದಾನ
ಪ್ರಗತಿಪರ ಚಿಂತಕ ಎ.ಎಂ.ಬಾಬು, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ, ವಿಜಯಕರ್ನಾಟಕ ಹಿರಿಯ ಜಿಲ್ಲಾ ವರದಿಗಾರ ಬೀರೇಶ್ ಕಬಿನಿ, ಜಾನಪದ ಭಾವಗೀತೆ ಗಾಯಕ ದೇವಾನಂದ ವರಪ್ರಸಾದ್, ಯುವ ಪ್ರತಿಭೆ ಕು.ಎಂ.ಪಿ.ಚೇತನಾ, ಯುವ ಚಿಂತಕ ಎಸ್.ಎಂ.ಸಿದ್ದರಾಜು(ಮಧು),ಸಾಮಾಜಿಕ ಹೋರಾಟಗಾರ ಎನ್.ಎಸ್.ನಾಗ, ಯುವ ಸಾಹಿತಿ ಶ್ರೇಯಸ್, ಶ್ರೀ ಸಾರ್ವಜನಿಕ ಕಾಳಿದಾಸ ವಿದ್ಯಾರ್ಥಿ ನಿಲಯ ಟ್ರಸ್ಟ್ ಅಧ್ಯಕ್ಷ ಆರ್.ಇಂದ್ರಾಣಿ ಅವರುಗಳಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

Prof G.Hemant Kumar-journalist-Ravindra Bhat-State-Level-Kanakashree-Award

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ರಾಷ್ಟ್ರೀಯ ಕಾರ್ಯದರ್ಶಿ ಸುಭಾಷ್ ಹೆಚ್.ಕಾನಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಬಿ.ಪಿ.ಮಹೇಶ್ಚಂದ್ರಗುರು, ರಾಮಮನೋಹರ ಲೋಹಿಯ ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಮಳವಳ್ಳಿ ಶಿವಣ್ಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕ ಎಂ.ರಾಮಯ್ಯ ,ಮೈಸೂರು ವಿವಿ ಕುಲಪತಿಗಳ ವಿಶೇಷಾಧಿಕಾರಿ ಡಾ.ಹೆಚ್.ಕೆ.ಚೇತನ್ ಜಿ.ಪಂ.ಮಾಜಿ ಅಧ್ಯಕ್ಷರಾದ ಕೆ.ಮರೀಗೌಡ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ಮತ್ತಿತರರು ಭಾಗವಹಿಸಿದ್ದರು.

english summary….

State-level Kanakshri award for MU VC Prof. G. Hemanth Kumar and journalist Ravindra Bhat

Mysuru, Dec. 4, 2020 (www.justkannada.in): Opposition leader and former Chief Minister Siddaramaiah conferred the State-level Kanakashri awards on Mysore University Vice-Chancellor Prof. G. Hemanth Kumar and Prajavani Executive Editor Ravindra Bhat.

The awards were conferred at a programme held at the Vignana Bhavan, in Manasagangotri, jointly organised by the Karnataka State Backward Castes Awareness Forum, Indian Dalit Literature Academy, Delhi, Karnataka Unit, on the occasion of Kanakadasa Jayanthi.Prof G.Hemant Kumar-journalist-Ravindra Bhat-State-Level-Kanakashree-Award

District-level awards were given to eight persons in recognition of their services, including A.M. Babu, Progressive Thinker, Mysuru District Journalists Association Executive Committee member, and Vijayakarnataka Senior District reporter Beeresh Kabini, Folk Song Singer Devanand Varaprasad, Young Talent Kum. M.P. Chetana, Young Thinker S.M. Siddaraju (Madhu), Social Activist N.S. Nagar, Young litterateur, Shreyas, and Sri Sarvajanika Kalidasa Vidyarthi Nilaya Trust President R. Indrani.

Keywords: Kanakshri state-level award/ District-level awards

key words : Prof G.Hemant Kumar-journalist-Ravindra Bhat-State-Level-Kanakashree-Award