ಮೈಸೂರು,ಜುಲೈ,5,2022(www.justkannada.in): ಮೈಸೂರು ವಿವಿಯ ಸ್ಪೋರ್ಟ್ಸ್ ಫೆವಲಿಯನ್ ನಲ್ಲಿ ನಡೆದ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಖೋ-ಖೋ ಪಂದ್ಯಾವಳಿಗೆ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಚಾಲನೆ ನೀಡಿದರು.
ಪಂದ್ಯಾವಳಿಗೆ ತುಂತುರು ಮಳೆ ಆರಂಭವಾದ್ದರಿಂದ ಹೊರಾಂಗಣದ ಎರಡು ಅಂಕಣಗಳು ತೇವಗೊಂಡವು. ಒಳಂಗಾಣದಲ್ಲಿ ಉದ್ಘಾಟನಾ ಪಂದ್ಯ ನಡೆಯಿತು. ಉಳಿದ ಪಂದ್ಯಗಳು ಇಲ್ಲಿಯೇ ನಡೆಯಲಿವೆ. ಮೊದಲ ಪಂದ್ಯದಲ್ಲಿ ಮೈಸೂರು ತಂಡವು ಪಾಣಿಪತ್ ನ ಕುರುಕ್ಷೇತ್ರ ವಿಶ್ವವಿದ್ಯಾಲಯವನ್ನು 10–5ರಿಂದ ಮಣಿಸಿ ಶುಭಾರಂಭ ಮಾಡಿತು.
ಪಂದ್ಯಾವಳಿಯಲ್ಲಿ ದೇಶದ 4 ವಲಯಗಳಿಂದ ತಲಾ 4ರಂತೆ 16 ತಂಡಗಳು ಪಾಲ್ಗೊಳ್ಳಲಿವೆ. ದಕ್ಷಿಣ ವಲಯದಿಂದ ರಾಜ್ಯದ ಮೈಸೂರು, ಆಂಧ್ರ ಪ್ರದೇಶದ ಕಾಕತೀಯ ವಿಶ್ವವಿದ್ಯಾಲಯ, ಕೇರಳದ ಕ್ಯಾಲಿಕಟ್ ಹಾಗೂ ಕೇರಳ ವಿಶ್ವವಿದ್ಯಾಲಯಗಳು ಕಣದಲ್ಲಿವೆ. ಲೀಗ್ ಹಂತದಲ್ಲಿ ಒಟ್ಟು 16 ಪಂದ್ಯಗಳಿದ್ದು, ಜುಲೈ 6ರಂದು ನಾಕೌಟ್, ಸೆಮಿಫೈನಲ್– ಫೈನಲ್ ಪಂದ್ಯಗಳು 7ರಂದು ನಡೆಯಲಿವೆ.
ಕುಲಸಚಿವ ಪ್ರೊ.ಆರ್.ಶಿವಪ್ಪ, ಸಿಂಡಿಕೇಟ್ ಸದಸ್ಯ ಡಾ.ಈ.ಸಿ.ನಿಂಗರಾಜು, ಹಣಕಾಸು ಅಧಿಕಾರಿ ಸಂಗೀತ ಗಜಾನನ, ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ. ಕೃಷ್ಣಯ್ಯ ಇದ್ದರು.
Key words: Prof. G. Hemanth Kumar – All -India -Inter University- Women’s- Kho-Kho -Tournament.
ENGLISH SUMMARY…
Prof. G. Hemanth Kumar flags off All India Inter University Women’s Kho-Kho tourney
Mysuru, July 5, 2022 (www.justkannada.in): Prof. G. Hemanth Kumar, Vice-Chancellor, University of Mysore, today flagged off the All India Inter-University Women’s Kho-Kho tournament held at the Sports Pavilion in the University campus.
Both the courts were a little wet due to drizzling. The inaugural match of the tournament was conducted in the indoor stadium. The remaining tournaments will also be held there. In the first match the Mysuru team defeated the Kurukshetra University team of Panipat by 10-5 points and made a good start.
A total number of 16 teams including 4 teams from 4 zones across the country is taking part in the tournament. University of Mysuru from Karnataka, Kakateeya University from Andhra Pradesh, Calicut and Kerala Universities from Kerala are in the arena from the South zone. There will be a total number of 16 matches in the league level, The knock-out match will be held on July 6, followed by semi-finals and final matches on July 7.
Prof. R. Shivappa, Registrar, University of Mysore, Syndicate member Dr. E.C. Ningaraju, Finance Officer Sangeetha Gajanan, University of Mysore Physical Education Director Prof. Krishnaiah and others were present.
Keywords: Inter-University Kho-Kho tournament/ Mysuru