ಪ್ರೊ.ಎಸ್.ಎನ್.ಹೆಗಡೆ ಅವರ ನೊಬೆಲ್ ಸಾಧಕರ ಕುರಿತ ಸಂಪುಟಗಳು ಪ್ರಸಾರಂಗದಿಂದ ಪ್ರಕಟ : ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ವಿಶ್ವಾಸ

ಮೈಸೂರು,ನವೆಂಬರ್,02,2020(www.justkannada.in) : ವಿಜ್ಞಾನ ಲೇಖಕ ಪ್ರೊ.ಎಸ್.ಎನ್.ಹೆಗಡೆ ಅವರ ’ವೈದ್ಯಕೀಯ ಕ್ಷೇತ್ರದ ನೊಬೆಲ್ ಪುರಸ್ಕೃತರು ಸಂಪುಟಗಳ’ ಮುಂದಿನ ಮುದ್ರಣವನ್ನು ವಿವಿಯ ಪ್ರಸಾರಂಗದಿಂದ ಪ್ರಕಟಿಸಲಾಗುವುದು ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ವಿಶ್ವಾಸವ್ಯಕ್ತಪಡಿಸಿದರು.

jk-logo-justkannada-logo

 ವಿಜ್ಞಾನ ಭವನದಲ್ಲಿ ಸೋಮವಾರ ಮೈಸೂರು ವಿಶ್ವವಿದ್ಯಾಲಯ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ್ದ ಡಾ.ಎಂ.ಆರ್.ರಾಜಶೇಖರ್ ಶೆಟ್ಟಿ ಅವರ 101ನೇ ಜನ್ಮ ದಿನಾಚರಣೆ ಮತ್ತು ಲೇಖಕ ಡಾ.ಎಸ್.ಎನ್.ಹೆಗಡೆ ಅವರ ‘’ವೈದ್ಯಕೀಯ ಕ್ಷೇತ್ರದ ನೊಬೆಲ್ ಪುರಸ್ಕೃತರು ಸಂಪುಟ 2’’ ವರ್ಚುವಲ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

 

ಡಾ.ಎಂ.ಆರ್.ರಾಜಶೇಖರ್ ಶೆಟ್ಟಿ ಅವರಿಗೆ ಈ ಕೃತಿಯನ್ನು ಅರ್ಪಣೆ ಮಾಡಿರುವುದು ವಿಶೇಷವಾಗಿದೆ. ಪ್ರೊ.ಎಸ್.ಎನ್.ಹೆಗಡೆ ಅವರು ಈಗಾಗಲೇ ಎರಡು ಸಂಪುಟಗಳ ಹೊರತಂದಿದ್ದು, ಒಟ್ಟು 8 ಸಂಪುಟಗಳ ಪ್ರಕಟಿಸುವ ಕನಸು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಯ ಪ್ರಸಾರಂಗದ ವತಿಯಿಂದ ಉಳಿದ ಸಂಪುಟಗಳ ಮುದ್ರಣಕ್ಕೆ ಒತ್ತು ನೀಡಲಾಗುವುದು. ಈ ಕುರಿತು ಚರ್ಚಿಸಲಾಗುವುದು ಎಂದರು.

Prof.S.N.Hegade,Volumes,Nobel,Achievers,Published,broadcast,Chancellor,Prof.G.Hemant Kumar,Confidence 

 

ಶಿಕ್ಷಕನನ್ನು, ಮತ್ತೊಬ್ಬ ಶಿಕ್ಷಕ ಮಾತ್ರ ಸಿದ್ಧಪಡಿಸಬಲ್ಲ. ಮೈಸೂರು ವಿವಿ ನಿಮ್ಮ ಬರವಣಿಗೆ ಸಹಕಾರಿಯಾಗಿರುತ್ತದೆ.

ವಿಜ್ಞಾನಿಗಳ ಜೀವನ ಚರಿತ್ರೆ ನೋಡಿದರೆ ಅವರು ಪಟ್ಟ ಶ್ರಮ ಅಪಾರ. ಸಂಶೋಧನೆಗಾಗಿ ಅನೇಕರು ತಮ್ಮ ಜಿವನವನ್ನೆ ಮುಡಿಪಾಗಿಟ್ಟಿದ್ದಾರೆ ಎಂದು ಉದಾಹರಣೆ ಸಹಿತವಾಗಿ ವಿವರಿಸಿದರು.

 

ವಿಜ್ಞಾನಿಗಳ ಕೊಡುಗೆ ಕುರಿತು ಮುಂದಿನ ಪೀಳಿಗೆಯವರಿಗೆ ಕೃತಿಯ ಮೂಲಕ ತಿಳಿಸುವ ನಿಮ್ಮ ಕಾರ್ಯ ನಿಜಕ್ಕೂ ಶ್ಲಾಘನೀಯ. ವಿಜ್ಞಾನಿಗಳು ಸದುದ್ದೇಶದಿಂದ ಮಾಡಿದ ಸಂಶೋಧನೆಗಳನ್ನು ಇಂದು ಅನೇಕರು ಕೆಡಕಿಗೆ ಬಳಸಿಕೊಳ್ಳುತ್ತಿರುವುದು ಬೇಸರದ ಸಂಗತಿ ಎಂದರು.

Prof.S.N.Hegade,Volumes,Nobel,Achievers,Published,broadcast,Chancellor,Prof.G.Hemant Kumar,Confidence 

 

225 ವಿಜ್ಞಾನಿಗಳ ಜೀವನ ಚರಿತ್ರೆಯ ಬಗ್ಗೆ ಬರೆಯುವುದು ಸುಲಭದ ಕೆಲಸವಲ್ಲ. ಕಡಿಮೆ ಎಂದರೂ ಸುಮಾರು 5 ಸಾವಿರಕ್ಕೂ ಹೆಚ್ಚು ಪುಟಗಳಾಗುತ್ತದೆ. ಇಷ್ಟು ಮಾಹಿತಿಯು ಕನ್ನಡದಲ್ಲಿ ದೊರಕುವಂತೆ ಮಾಡುವ ಎಸ್. ಎನ್. ಹೆಗಡೆ ಅವರ ಕಾರ್ಯ. ಮತ್ತಷ್ಟು ಉತ್ತಮ ಕೃತಿಗಳು ಹೊರಬರಲಿ ಎಂದು ಹಾರೈಸಿದರು.

key words : Prof.S.N.Hegade-Volumes-Nobel-Achievers-Published-broadcast-Chancellor-Prof.G.Hemant Kumar-Confidence