ಪ್ರೊ.ವಿ.ಕೆ.ನಟರಾಜ್ ನಿಧನ: ಹೆಚ್.ಎ ವೆಂಕಟೇಶ್ ಸಂತಾಪ

ಮೈಸೂರು,ಡಿಸೆಂಬರ್,9,2024 (www.justkannada.in): ಮೈಸೂರು ವಿಶ್ವವಿದ್ಯಾನಿಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರೂ ಮುಖ್ಯಸ್ಥರೂ ಆಗಿದ್ದನಿವೃತ್ತಿ ನಂತರ ಚೆನ್ನೈನ ಮದ್ರಾಸ್ ಇನಸ್ಟಿಟ್ಯೂಟ್ ಆಫ್ ಡೆವಲಪ್‌ಮೆಂಟಲ್ ಸ್ಟಡೀಸ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ  ಪ್ರೊ.ವಿ.ಕೆ.ನಟರಾಜ್ ಇಂದು‌ ಬೆಳಿಗ್ಗೆ ನಿಧನರಾಗಿದ್ದು, ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ಸಂತಾಪ ಸೂಚಿಸಿದ್ದಾರೆ.

ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಹೆಚ್ ಎ ವೆಂಕಟೇಶ್,  ಮೈಸೂರು ವಿಶ್ವವಿದ್ಯಾನಿಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಪ್ರಾಧ್ಯಾಪಕರೂ ಮುಖ್ಯಸ್ಥರೂ ಆಗಿದ್ದರು. ನಿವೃತ್ತಿ ನಂತರ ಚೆನ್ನೈನ ಮದ್ರಾಸ್ ಇನಸ್ಟಿಟ್ಯೂಟ್ ಆಫ್ ಡೆವಲಪ್‌ಮೆಂಟಲ್ ಸ್ಟಡೀಸ್ ನಿರ್ದೇಶಕರಾಗಿದ್ದರು. ಪ್ರೊ.ವಿ.ಕೆ. ನಟರಾಜ್ ಅವರು ಮೈಸೂರು ವಿಶ್ವವಿದ್ಯಾನಿಲಯದ ಅಭಿವೃದ್ಧಿ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ, ಪ್ರಾಧ್ಯಾಪಕರಾಗಿ, ಕುಲ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಉತ್ತಮ ಕೃತಿಗಳನ್ನು ರಚಿಸಿದ್ದಾರೆ. ಪ್ರಸ್ತುತ ಬೆಳವಣಿಗೆಗಳ ಬಗ್ಗೆ ತಮ್ಮ ಚಿಂತನೆ ಗಳನ್ನು  ಸ್ಪಷ್ಟವಾಗಿ ದಾಖಲಿಸುತ್ತಿದ್ದರು. ಅತ್ಯುತ್ತಮ ಭಾಷಣಕಾರರಾಗಿ ದೇಶದ ಒಳಗೆ ಮತ್ತು ಹೊರಗೆ ತಮ್ಮ ಉಪನ್ಯಾಸವನ್ನು ನೀಡಿದ್ದಾರೆ.

ಪ್ರೊ.ವಿ.ಕೆ.ನಟರಾಜ್  ಅವರು ಸೇವೆಯಲ್ಲಿದ್ದಾಗ ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿರುವಾಗ ನಮ್ಮ ಅಭಿಪ್ರಾಯಗಳು ಭಿನ್ನವಾಗಿದ್ದರೂ ವೈಯಕ್ತಿಕ ವಿಷಯವಾಗಿ ತೆಗೆದುಕೊಂಡವರಲ್ಲ. ಮಾಜಿ ಸಭಾಪತಿ ಪ್ರೊ. ಬಿ.ಕೆ. ಚಂದ್ರಶೇಖರ್  ಅವರ ಜೊತೆ ಹಲವು ಸಂದರ್ಭಗಳಲ್ಲಿ ಖಾಸಗಿ ಭೇಟಿಯಾದಾಗ ರಾಜಕೀಯವಾಗಿ ಅತ್ಯುತ್ತಮವಾಗಿ ಚರ್ಚಿಸಿ ಸಲಹೆ  ನೀಡುತ್ತಿದ್ದರು.  ಪ್ರೊ. ವಿ.ಕೆ ನಟರಾಜ್ ರವರ ನಿಧನಕ್ಕೆ ತೀವ್ರ ಸಂತಾಪ  ಸೂಚಿಸುತ್ತೇನೆ ಎಂದು ತಿಳಿಸಿದ್ದಾರೆ.

Key words: Prof. V.K. Nataraj, passes away, H.A. Venkatesh, condoles