ಕೇರಳಾ,ಜು,27,2019(www.justkannada.in): ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ರಾತ್ರಿ ಸಂಚಾರದ ಮೇಲಿನ ನಿಷೇಧ ತೆಗೆದುಹಾಕುವಂತೆ ವಯನಾಡು ಸಂಸದ ರಾಹುಲ್ ಗಾಂಧಿ ಮೂಲಕ ಕೇರಳಿಗರು ರಾಜ್ಯದ ಮೇಲೆ ಒತ್ತಡ ಏರಲು ಹೊಸ ತಂತ್ರ ರೂಪಿಸಲು ಮುಂದಾಗಿದ್ದಾರೆ.
ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ರಾತ್ರಿ ಸಂಚಾರದ ಮೇಲಿನ ನಿಷೇಧ ನಿಷೇದ ತೆಗೆದುಹಾಕುವಂತೆ ರಾಹುಲ್ ಗಾಂಧಿ ಮೂಲಕ ರಾಜ್ಯದ ಜನರ ಮೇಲೆ ಒತ್ತಡ ಏರಲು ಕೇರಳಿಗರು ಮುಂದಾಗಿದ್ದು, ವಯನಾಡು ಜಿಲ್ಲೆಯ ಸಂಸದ ರಾಹುಲ್ ಗಾಂಧಿಗೆ ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಂಡುವಂತೆ ಕೇರಳಿಗರು ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ.
ಇದರ ಬೆನ್ನಲ್ಲೆ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ರಾತ್ರಿ ಸಂಚಾರದ ಮೇಲಿನ ನಿಷೇಧ ತೆಗೆದುಹಾಕಬಹುದೇ..? ಎಂದು ರಾಹುಲ್ಗಾಂಧಿ ಸಂಸತ್ ಅಧಿವೇಶನದಲ್ಲಿ ಪ್ರಶ್ನಿಸಿದ್ದು, ರಾಹುಲ್ ಪ್ರಶ್ನೆಯಿಂದ ಕೇರಳ ರಾಜ್ಯದ ಜನರ ಧ್ವನಿಗೆ ಶಕ್ತಿ ಬಂದಂತಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಜನರಲ್ಲಿ ಆತಂಕ ಹೆಚ್ಚಾಗಿದ್ದು, ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ರಾತ್ರಿ ಸಂಚಾರಕ್ಕೆ ಅನುಮತಿ ದೊರೆಯಬಹುದೇ ಎಂಬ ಸಣ್ಣ ಆತಂಕ ರಾಜ್ಯದ ಜನರಲ್ಲಿ ಶುರುವಾಗಿದೆ.
ಈ ನಡುವೆ ಈಗಾಗಲೇ ಬಂಡಿಪುರ ರಾತ್ರಿ ಸಂಚಾರ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಸಂಸತ್ ನಲ್ಲಿ 6ಪಶ್ನೆ ಕೇಳಿದ್ದು, ಈ ಮೂಲಕ ರಾಜ್ಯದ ಜನರಿಗೆ ವಯನಾಡು ಸಂಸದ ರಾಹುಲ್ ಗಾಂಧಿ ತಲೆನೋವು ತರಲು ಮುಂದಾದ್ರೆ ಎಂಬ ಪ್ರಶ್ನೆ ಮೂಡಿದೆ.
Key words: Prohibition –Night-Traffic – Bandipur National Park- Wayanad MP -Rahul Gandhi