ಬೆಂಗಳೂರು,ಸೆಪ್ಟೆಂಬರ್,28,2020(www.justkannada.in) : ರೈತರ ಕರ್ನಾಟಕ ಬಂದ್ ಗೆ ನಿಷೇಧ ಹೇರುವ ಬದಲು, ನಿಮ್ಮ ರೈತ-ಕಾರ್ಮಿಕ ವಿರೋಧಿ ಮನಸ್ಥಿತಿಗೆ ನಿಷೇಧ ಹೇರಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ ಮಾಡುವ ಮೂಲಕ ಆಕ್ರೋಶವ್ಯಕ್ತಪಡಿಸಿದ್ದಾರೆ.
ಎಪಿಎಂಸಿ ಕಾಯ್ದೆ ತಿದ್ದುಪಡಿಯು ಕೆಟ್ಟ ಪದ್ಧತಿಯಾಗಿದ್ದು, ಅದನ್ನು ರದ್ದುಮಾಡಬೇಕು. ರಾಜ್ಯ ಹರಾಜು ಹಾಕುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ಮಾಡಿದ್ದಕ್ಕೆ ಜನರಲ್ಲಿ ಕ್ಷಮೆಯಾಚಿಸಿ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಯಡಿಯೂರಪ್ಪನವರೇ ನಿಮಗೆ ಇದು ಅಗ್ನಿ ಪರೀಕ್ಷೆಯಾಗಿದೆ. ರಾಜ್ಯದಲ್ಲಿ ಕೋವಿಡ್ ನಿಂದ 8500ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವಾಗ ಮುಖ್ಯಮಂತ್ರಿಗಳಾದ ನಿಮಗೆ ಹಾಗೂ ನಿಮ್ಮ ಸಚಿವ ಸಂಪುಟಕ್ಕೆ ಹೇಗೆ ನಿದ್ದೆ ಬರುತ್ತದೆ ಎಂದು ಪ್ರಶ್ನಿಸಿದ್ದಾರೆ.
ಅಸಮರ್ಥ ಮತ್ತು ಬೇಜವಾಬ್ದಾರಿ ಬಿಜೆಪಿ ಸರಕಾರ ಇನ್ನೂ ನಿದ್ದೆಯಿಂದ ಎದ್ದಿಲ್ಲ
ಪ್ರತಿದಿನ 9000 ಕ್ಕೂ ಹೆಚ್ಚು ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. 1 ಲಕ್ಷ ಸಕ್ರಿಯ ಪ್ರಕರಣದೊಂದಿಗೆ, ಈವರೆಗೂ ರಾಜ್ಯದಲ್ಲಿ 5,75,000 ಪ್ರಕರಣ ದಾಖಲಾಗಿವೆ. ಆದರೆ, ಅಸಮರ್ಥ ಮತ್ತು ಬೇಜವಾಬ್ದಾರಿ ಬಿಜೆಪಿ ಸರಕಾರ ಮಾತ್ರ ಇನ್ನೂ ನಿದ್ದೆಯಿಂದ ಎದ್ದಿಲ್ಲ ಎಂದು ಕಿಡಿಕಾರಿದ್ದಾರೆ.
key words : Prohibition-anti-peasant-mentality-AICC-General-Secretary Randeep Singh Surjewala
ENGLISH SUMMARY
Dear B.S.Yediyurappa ji,
Instead of banning the Farmer’s #Karnataka Bandh, ‘ban’ & ‘banish’ the anti farmer-labourer mindset.
Withdraw the law & apologise for the blatant sell out by BJP on Land Reforms Bill.
Repeal the draconian amendments to APMC Act
This is ur litmus test!
How can CM Yeddyurappa & his turncoat Cabinet sleep at night as #COVID19 deaths cross 8,500 in the State.
With 5,75,000 #Covid cases, over 1 lakh active cases, the daily spike has crossed the 9000 mark.
An incompetent & uncaring BJP Govt sleeps as State is engulfed in pandemic!