ಮೈಸೂರು,ನವೆಂಬರ್,12,2020(www.justkannada.in): ಮುಡಾ ಹಾಗೂ ಭೂ ಮಾಲೀಕರ ಜಂಟಿ ಸಹಭಾಗಿತ್ವದಲ್ಲಿ ಬಡಾವಣೆ ಅಭಿವೃದ್ಧಿ ಯೋಜನೆ ಅನುಷ್ಟಾನ ಮಾಡಲಾಗುತ್ತದೆ. ಜಂಟಿ ಸಹಭಾಗಿತ್ವದಡಿ ಅಭಿವೃದ್ಧಿ ಪಡಿಸಲು ಉದ್ದೇಶಿಸಿರುವ ಯೋಜನೆಗಳ ಬಗ್ಗೆ ಭೂ ಮಾಲೀಕರರೊಂದಿಗೆ ಒಡಂಬಡಿಕೆ ಮಾಡಿಕೊಂಡು ಬಳಿಕ 18 ತಿಂಗಳೊಳಗೆ ಯೋಜನೆ ಪೂರ್ಣಗೊಳಿಸಲಾಗುತ್ತದೆ ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ತಿಳಿಸಿದರು.
ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಪರಸ್ಪರ ಒಪ್ಪಿಗೆ ಪತ್ರ ನೀಡಿ ಒಪ್ಪಂದದ ಕರಾರಿಗೆ ಒಳಪಡುವ ಭೂ ಮಾಲೀಕರಿಗೆ ಮುಂಗಡವಾಗಿ 10 ಲಕ್ಷ ರೂಪಾಯಿ ನೀಡಲಾಗುವುದು. ಯೋಜನೆಯ ಪ್ರಕಾರ ಭೂ ಮಾಲೀಕರಿಗೆ ವಸತಿ ವಲಯದ ಶೇಕಡಾ 50-50 ರ ಅನುಪಾತದಡಿ ಪ್ರತಿ ಎಕರೆಗೆ 30×40 ಚದರ ಅಡಿ ಅಳತೆಯ ಅಂದಾಜು 9 ನಿವೇಶನಗಳನ್ನು ನೀಡಲಾಗುವುದು. ಭೂ ಮಾಲೀಕರಿಗೆ ಮೂಲೆ ಅಥವಾ ವಾಣಿಜ್ಯ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದಿಲ್ಲ. ಹಂಚಿಕೆ ಪಡೆದ ಭೂ ಮಾಲೀಕರು ನಿವೇಶನಗಳನ್ನು ಇತರರಿಗೆ ಮಾರಾಟ ಮಾಡುವ ಹಕ್ಕನ್ನು ಹೊಂದಿರುತ್ತಾರೆ ಎಂದು ಮಾಹಿತಿ ನೀಡಿದರು.
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ಸಭೆ ನಿರ್ಣಯದಂತೆ ಅಕ್ರಮಗಳನ್ನು ತಡೆಯಲು ಜಾಗೃತದಳ ರಚನೆ ಮಾಡಲಾಗುತ್ತಿದೆ. ಖಾಸಗಿ ಬಡಾವಣೆ ಅಭಿವೃದ್ಧಿಕಾರರು ಹಾಗೂ ಅಕ್ರಮ ಒತ್ತುವರಿಯ ಮೇಲೆ ಜಾಗೃತಿದಳ ನಿಗಾ ಇಡಲಿದೆ ಎಂದು ಮುಡಾ ಅಧ್ಯಕ್ಷ ಹೆಚ್.ವಿ ರಾಜೀವ್ ತಿಳಿಸಿದರು.
English summary…
Development of MUDA layout in joint association with land owners: Land owners to be provided Rs. 10 lakh advance
Mysuru, Nov.12, 2020 (www.justkannada.in): The Mysuru Urban Development Authority (MUDA), in association with the land owners has planned to implement a layout development programme.
Addressing a press meet held here today H.V. Rajeev, Chairman, MUDA, explained that an agreement will be signed with the land owners about the development of the proposed layout and it will be completed within 18 months.
“A sum of Rs. 10 lakh will be provided to the land owners who will sign the mutual agreement. As per the scheme, about 9 sites measuring 30×40 sq. ft will provided to the land owners on the basis of 50:50 ratio. However, corner sites will not be given to them. The land owners who get sites under this plan will have the rights to sell them to others,” he explained.
Key words: Project- development -project -jointly -Muda – land owners-MUDA President- HV Rajeev.