ಬೆಂಗಳೂರು,ಜುಲೈ,1,2023(www.justkannada.in): ಕೊಟ್ಟ ಮಾತಿನಂತೆ ಅಕ್ಕಿ ಸಿಗುವವರೆಗೂ ಬಿಪಿಎಲ್ ಕಾರ್ಡುದಾರರಿಗೆ ಹಣ ಹಾಕುತ್ತೇವೆ. ಬಿಜೆಪಿ ಸಲಹೆಯನ್ನೂ ಪರಿಗಣಿಸಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
ಬಿಪಿಎಲ್ ಕಾರ್ಡ್ದಾರರಿಗೆ ಅಕ್ಕಿ ಬದಲು ಹಣ ಹಾಕುವ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಕೊಟ್ಟ ಮಾತಿನಂತೆ ಅಕ್ಕಿ ಸಿಗುವವರೆಗೂ ಹಣ ಕೊಡುತ್ತೇವೆ. ಸಿಎಂ, ಆಹಾರ ಸಚಿವರು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಶೇಕಡಾ 80ರಿಂದ 85ರಷ್ಟು ಕಾರ್ಡ್ದಾರರ ಖಾತೆಗೆ ಆಧಾರ್ ಲಿಂಕ್ ಆಗಿದೆ. ಶೇಕಡಾ 15-20ರಷ್ಟು ಕಾರ್ಡ್ದಾರರ ಅಕೌಂಟ್ ಟ್ರೇಸ್ ಆಗಬೇಕು. ಆಧಾರ್ ಲಿಂಕ್ ಖಾತೆಗೆ ಹಣ ಕೊಡಿ ಎಂದರೆ ಹಾಕುತ್ತೇವೆ. ಬಿಜೆಪಿ ಸಲಹೆಯನ್ನೂ ಪರಿಗಣಿಸಿ ಈ ತೀರ್ಮಾನ ಮಾಡಿದ್ದೇವೆ ಎಂದರು.
10 ಕೆಜಿ ಅಕ್ಕಿ ಕೊಡಬೇಕೆಂದು ಬಿಜೆಪಿ ಒತ್ತಾಯ ಕುರಿತು ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿಯವರ ದ್ವಂದ್ವ ನಿಲುವು ಗೊತ್ತಾಗುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ಗದಪ್ರಹಾರ ಮಾಡುತ್ತಿದೆ. ರಾಜ್ಯದ ಎಫ್ಸಿಐ ಗೋದಾಮಿನಲ್ಲಿ ಅಕ್ಕಿ ಹುಳು ಹಿಡಿಯುತ್ತಿದೆ. ಕಾಂಗ್ರೆಸ್ಗೆ ಒಳ್ಳೆಯ ಹೆಸರು ಬರಲಿದೆ ಎಂದು ಅಕ್ಕಿ ಕೊಡುತ್ತಿಲ್ಲ. ನಾವು ದೀರ್ಘಾವಧಿಗೆ ಯೋಜನೆ ರೂಪಿಸುತ್ತಿದ್ದೇವೆ. ನಮ್ಮ ರಾಜ್ಯದಲ್ಲೂ ಭತ್ತ ಬೆಳೆಯುವರಿಗೂ ಬೆಂಬಲ ನೀಡುತ್ತೇವೆ ಎಂದು ತಿಳಿಸಿದರು.
Key words: promised-money – rice – decision – BJP-advice- DCM -DK Shivakumar