ಪ್ರಾಸಿಕ್ಯೂಷನ್ ಅನುಮತಿ ಸಿಗುತ್ತೆ ಎನ್ನುವ ನಂಬಿಕೆ ಇದೆ :  ಟಿ.ಜೆ. ಅಬ್ರಾಹಂ

I am confident of getting prosecution sanction: TJ Abraham

 

ಮೈಸೂರು, ಆ.05,2024: (www.justkannada.in news) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಡೆಯಿಂದ ಅನೇಕ ಪ್ರತಿಕ್ರಿಯೆ ಬಂದಿವೆ. ಜಗದೀಶ್ ಶೆಟ್ಟರ್, ಯಡಿಯೂರಪ್ಪ ಬಗ್ಗೆ ನಾನು ಆರೋಪ ಮಾಡಿದರೆ ಆಗ ನನ್ನದ್ದು ಸತ್ಯ. ಆದರೆ ಈಗ ಇವರ ಬಗ್ಗೆ ಮಾತಾಡಿದ್ದಕ್ಕೆ ಬ್ಲಾಕ್ ಮೇಲರ್ ಆಗಿದ್ದೇನೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ ಹೇಳಿಕೆ.

ಟ್ರೋಲ್ ಪೇಜ್ ನಲ್ಲಿ ನನ್ನ ಬೈಯ್ತವರೆ. ಇದು ಸಿದ್ದರಾಮಯ್ಯ ಸೋಲು ಒಪ್ಪಿಕೊಂಡ ರೀತಿ ಅನ್ನಿಸುತ್ತಿದೆ.

2004 ರಲ್ಲಿ ಮಲ್ಲಿಕಾರ್ಜುನ ಸ್ವಾಮಿ ಕೆಸರೆಯಲ್ಲಿ ಕೃಷಿ ಭೂಮಿ ಖರೀದಿ ಮಾಡುತ್ತಾರೆ. ಅಲ್ಲಿ ಆಗ ಕೃಷಿ ಭೂಮಿ ಇತ್ತಾ? 2001 ರಲ್ಲಿ ಅಭಿವೃದ್ಧಿ ಮಾಡಿದ್ದ ಬಡಾವಣೆ ಆಗಿತ್ತು.  ಅದನ್ನು ಹೇಗೆ 2004 ರಲ್ಲಿ ಕೃಷಿ ಭೂಮಿ ಅಂತಾ ಹೇಗೆ ಖರೀದಿ ಮಾಡಿದ್ರು?  ನಿವೇಶನ ಹಂಚಿದ್ದನ್ನು ಹೇಗೆ ಮತ್ತೆ ವಸತಿ ಭೂಮಿ ಎಂದು ಪರಿವರ್ತನೆ  ಮಾಡಿಸಿ ಕೊಳ್ಳುತ್ತಿರಿ?

ತಮ್ಮ ತಾಯಿಗೆ ಪರಿಹಾರದ ಹೆಸರಿನಲ್ಲಿ ಭೂಮಿ ಸಿಗುವಾಗ, ಪ್ರಮುಖ ಸಭೆಗಳಲ್ಲಿ ಡಾ. ಯತೀಂದ್ರ  ಸಿದ್ದರಾಮಯ್ಯ ಸಹ ಕುಳಿತಿದ್ದರು. ಸಿಎಂ ಕುಟುಂಬಕ್ಕೆ ಮಂಜೂರಾದ 14 ಸೈಟ್ ಗಳನ್ನು ವಾಪಾಸ್ ಪಡೆಯಿರಿ. ಸೈಟ್ ಕೊಟ್ಟಿರುವುದು ಅಕ್ರಮ ಅದನ್ನು ವಾಪಾಸ್ ಪಡೆಯಿರಿ.

ನನ್ನ ಪ್ರಕಾರವಾಗಿ 55 ಕೋಟಿ ನಷ್ಟವಾಗಿದೆ.  ಡಿ.ಕೆ.ಶಿವಕುಮಾರ್‌ ಅವರಂಥ ಪಂಡಿತರು, ಪರಿಣಿತರು ನನ್ನ ಪ್ರಶ್ನೆಗೆ ಉತ್ತರ ಕೊಡದೆ ಸುಮ್ಮನೆ ಸಿಎಂ ಏನು ತಪ್ಪು ಮಾಡಿಲ್ಲ ಅಂತಾ ಭಾಷಣ ಮಾಡುತ್ತಿದ್ದಾರೆ?

ಇಂಥ ಕಾರಣಕ್ಕೆ ಪ್ರಾಸಿಕ್ಯೂಷನ್ ಕೊಡಬಾರದು ಅಂತಾ ಹೇಳಿ. ನಾನು ಹೇಳಿರುವುದು ತಪ್ಪು ಅಂತಾ ಫ್ರೂವ್ ಮಾಡಿ.  ತನಿಖೆಗೆ ಆದೇಶ ಆಗುತ್ತೆ. ಪ್ರಾಸಿಕ್ಯೂಷನ್ ಅನುಮತಿ ಸಿಗುತ್ತೆ ಎನ್ನುವ ನಂಬಿಕೆ ಇದೆ.

key words: I am confident, of getting, prosecution sanction, TJ Abraham