ಮೈಸೂರು,ಡಿಸೆಂಬರ್,20,2020(www.justkannada.in) : ಜಿಲ್ಲಾ ಪತ್ರಕರ್ತರ ಅಭ್ಯುದಯ ಸಂಘಕ್ಕೆ ೧೦ ಲಕ್ಷ ರೂ. ಎಫ್ ಡಿ ನೀಡಲಾಗುವುದು ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹಾಗೂ ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಭರವಸೆ ನೀಡಿದರು.ಜಿಲ್ಲಾ ಪತ್ರಕರ್ತರ ಅಭ್ಯುದಯ ಸಹಕಾರ ಸಂಘದ ವಾರ್ಷಿಕ ಸಭೆ ಮತ್ತು ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಣ್ಣ ಸಂಸ್ಥೆಗಳಿಗೆ ಸಹಕಾರಿ ಯೂನಿಯನ್‌ಗಳು ಸಾಲ ಕೊಡುವುದು ಸಹಕಾರಿ ನಿಯಮಕ್ಕೆ ವಿರುದ್ಧವಾಗಿದೆ. ಆದರೂ ನಿಯಮವನ್ನು ಉಲ್ಲಂಘಿಸಿ ಜಿಲ್ಲಾ ಪತ್ರಕರ್ತರ ಅಭ್ಯುದಯ ಸಂಘಕ್ಕೆ ೧೦ ಲಕ್ಷ ರೂ. ಎಫ್ ಡಿ ನೀಡಲು ತೀರ್ಮಾನಿಸಲಾಗಿದೆ ಎಂದರು.
ಪತ್ರಕರ್ತರು ತಮ್ಮ ಒಳಗೆ ನೋವಿಟ್ಟುಕೊಂಡು ಸದಾಕಾಲ ಸಮಾಜವನ್ನು ತಿದ್ದುವ ಕೆಲಸ ಮಾಡತ್ತಿದ್ದಾರೆ. ಪತ್ರಕರ್ತರ ಬದುಕು ಕಠಿಣವಾಗಿದೆ. ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲು ಪರದಾಡುವ ಸನ್ನಿವೇಶಗಳು ಕಂಡಿದ್ದೇನೆ. ಆದರೂ ಅವರೆಂದಿಗೂ ಸ್ವಾಭಿಮಾನವನ್ನು ಬಿಟ್ಟು ಕೊಡುವುದಿಲ್ಲ. ಸಮಾಜ ಪತ್ರಕರ್ತರ ವಲಯವನ್ನು ಸದಾಕಾಲ ನೆನೆಯಬೇಕು ಎಂದು ಹೇಳಿದರು.
ಶಾಲೆ ಮತ್ತು ಸಹಕಾರ ಸಂಘಗಳು ವಿಕಾಸವಾದರೆ ಗ್ರಾಮಗಳ ಅಭಿವೃದ್ಧಿಯಾಗಲಿದೆ. ಹಾಗಾಗಿ ಸಣ್ಣ ಸಣ್ಣ ಸಹಕಾರಿ ಕ್ಷೇತ್ರಗಳು ಬೆಳವಣಿಗೆಗೆ ಒತ್ತು ನೀಡಬೇಕು. ಪತ್ರಕರ್ತರ ಕಷ್ಟಗಳಿಗೆ ಆರೋಗ್ಯ, ತುರ್ತು ಕಾರ್ಯಕ್ರಮಗಳಿಗೆ ಸಹಕಾರ ನೀಡುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಅಭ್ಯುದಯ ಸಂಘಕ್ಕೆ ಅಭಿನಂದನೆ ಸಲ್ಲಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಎಂ.ಎಸ್.ಕಾಶಿನಾಥ್ ಅವರಿಗೆ ಅಭ್ಯುದಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಿಲ್ಲಾ ಪತ್ರಕರ್ತರ ಸಂಘದ ಅಭ್ಯುದಯ ಸಹಕಾರ ಸಂಘದ ಅಧ್ಯಕ್ಷ ಕೆ.ದೀಪಕ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮರ್, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ಪತ್ರಕರ್ತ ರಾಘವೇಂದ್ರ, ಅನ್ವೇಷಣಾ ಸೇವಾ ಟ್ರಸ್ಟ್ ಸಂಸ್ಥಾಪಕ ಅಮರನಾಥ್ ರಾಜೇ ಅರಸ್, ಅರ್ಥ ಶಾಸ್ತ್ರ ಬಿಲ್ಡರ್ಸ್ ಅಂಡ್ ಡೆವಲಪರ್ಸ್‌ನ ಕೆ.ಮಂಜುನಾಥ್, ಪತ್ರಕರ್ತ ಸಿ.ಎ.ಶ್ರೀಧರ್ ರಾಜೇ ಅರಸ್, ನಂದೀಶ್ ರಾಜೇ ಅರಸ್ ಇತರರು ಇದ್ದರು.
key words : Prosperity-District-Journalists-association-will-10
Lakhs Rs. FD-MUDA-President-H.V.Rajeev-assures