ಮೈಸೂರು,ಜುಲೈ,1,2021(www.justkannada.in): ಕೊರೋನಾ ಸಂಕಷ್ಟದ ನಡುವೆ ಮತ್ತೆ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆ ಮಾಡಲಾಗಿದೆ. 25.50 ರೂಪಾಯಿ ಸಿಲಿಂಡರ್ ದರ ಹೆಚ್ಚಳ ಮಾಡುವ ಮೂಲಕ ಕೇಂದ್ರ ಸರ್ಕಾರ ದೇಶದ ಜನತೆಗೆ ಶಾಕ್ ನೀಡಿದೆ.
ಪೆಟ್ರೋಲ್ ಡೀಸೆಲ್ , ಅಗತ್ಯ ವಸ್ತುಗಳ ಬೆಲೆ ಏರಿಕೆ, ಹೀಗೆ ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ಬರೆ ಮೇಲೆ ಬರೆ ಹಾಕಲಾಗುತ್ತಿದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ. ‘ಅವರ ಬಾಯಿಗೆ ಮಣ್ಣಾಕ’ ಇವರನ್ನ ಗೆಲ್ಲಿಸಿದ್ದಕ್ಕೆ ಅನುಭವಿಸಬೇಕು…! ಎಂದು ಸರ್ಕಾರಗಳ ವಿರುದ್ಧ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊದಲೇ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿದೆ. ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದ್ದು ಜೀವನ ನಡೆಸಲು ಕಷ್ಟವಾಗ್ತಿದೆ. ಇಂತಹ ಸಂಧರ್ಭದಲ್ಲಿ ಮತ್ತೆ ದರ ಏರಿಕೆ ಮಾಡಿದ್ರೆ ನಾವು ಜೀವನ ನಡೆಸೋದು ಹೇಗೆ. ಪ್ರಧಾನಿ ಮೋದಿಯವರೇ ಜನಸಾಮಾನ್ಯರ ಬಗ್ಗೆಯೋ ಯೋಚನೆ ಮಾಡಿ. ಇಂತಹ ಆಡಳಿತ ನಡೆಸುವ ಬದಲು ಮನೆಯಲ್ಲಿದ್ದರೇ ಒಳಿತು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಬೆಲೆ ಏರಿಕೆ ಬಗ್ಗೆ ಸಾರ್ವಜನಿಕರು ಆಕ್ರೋಶದ ನುಡಿಗಳನ್ನಾಡಿದ್ದಾರೆ.
Key words: Protest -against -government -hike – LPG- cylinder –price