ಬೆಳಗಾವಿ,ಡಿಸೆಂಬರ್,20,2021(www.justkannada.in): ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಹಾನಿ ಮಾಡಿ ಪುಂಡಾಟಿಕೆ ಮೆರೆದಿರುವ ಎಂಇಎಸ್ ಹಾಗೂ ಶಿವಸೇನೆ ವಿರುದ್ಧ ಕನ್ನಡಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು ಈ ನಡುವೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎಂಇಎಸ್ ಮತ್ತು ಶಿವಸೇನೆ ಪುಂಡಾಟಿಕೆ ಖಂಡಿಸಿ ಹಿರೇಬಾಗೇವಾಡಿಯಿಂದ ಸುವರ್ಣ ಸೌಧದವರೆಗೆ ಬೆಳಗಾವಿ ಚಲೋ ನಡೆಸಲು ಮುಂದಾದ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರನ್ನ ಹಿರೇಬಾಗೇವಾಡಿ ಬಳಿಯೇ ತಡೆದ ಪೊಲೀಸರು ಅವರನ್ನ ವಶಕ್ಕೆ ಪಡೆದರು.
ಈ ಬಗ್ಗೆ ಮಾತನಾಡಿದ ಪ್ರವೀಣ್ ಶೆಟ್ಟಿ, ಬುಧವಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಸಭೆ ಇದೆ. ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸುತ್ತೇವೆ.ಎಂಇಎಸ್ ದೇಶದ್ರೋಹಿ ಸಂಘಟನೆ. ಅದನ್ನ ಬ್ಯಾನ್ ಮಾಡಲೇಬೇಕು ನಮ್ಮ ಮುಂದಿನ ಹೋರಾಟ ಉಗ್ರರೂಪದಲ್ಲಿ ಇರುತ್ತದೆ ಎಂದು ಹೇಳಿದರು.
ENGLISH SUMMARY…
Protest against MES, Shivasena: Police take KRV Praveen Shetty faction activists into custody
Belagavi, December 20, 2021 (www.justkannada.in): Activists of several pro-Kannada organizations are protesting against the vandalization of the Krantiveera Sangolli Rayanna statue in Belgavi by MES hooligans. Police have taken a few activists of the Karnataka Rakshana Vedike (KRV) Praveen Shetty faction who were protesting, into custody.
The KRV Praveen Shetty faction activists took out a Suvarna Soudha Chalo protest rally in Belgavi condemning the MES and Shivasena activists’ recent vandalism. The police stopped them near Hirebagewadi and took them into custody.
Speaking to the media persons, Praveen Shetty informed that a meeting will be held under the leadership of Vatal Nagaraj, on Wednesday. “We will discuss the future protest. MES is an anti-national organization. It should be banned. Our future protest will be serious,” he said.
Keywords: KRV Praveen Shetty faction/ Belagvi/ MES hooligans/ protest
Key words: Protest -against –MES- Shiv Sena –Karave- Praveen Shetty -activitist