ಬೆಂಗಳೂರು,ಮಾ,2,2021(www.justkannada.in): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಪ್ರತಿಭಟನೆ ಕಾವು ಹೆಚ್ಚಾಗಲಿದೆ. ಹೌದು, ತಮ್ಮ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಇಂದು ಸಾರಿಗೆ ನೌಕರರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಲಿದ್ದಾರೆ.
ಸೇವಾ ಹಿರಿತನದ ಮೇಲೆ ಗೌರವಧನ ಹೆಚ್ಚಳ, ಎಲ್.ಕೆಜಿ ಯುಕೆಜಿ ಅಂಗನವಾಡಿಗಳಲ್ಲೇ ಪ್ರಾರಂಭಿಸಬೇಕು. ವೈದ್ಯಕೀಯ ಸೌಲಭ್ಯ , ಪಿಂಚಿಣಿ ಸೌಲಭ್ಯ ಸೇರಿ 7 ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಇಂದು ಅಂಗನವಾಡಿ ಕಾರ್ಯಕರ್ತೆಯರು ಬೃಹತ್ ಪ್ರತಿಭಟನಾರ್ಯಾಲಿ ನಡೆಸಲಿದ್ದಾರೆ.
ನಗರದ ಕೆಎಸ್ ಆರ್ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನಾರ್ಯಾಲಿ ನಡೆಸಲಿದ್ದಾರೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಮಕ್ಕಳೊಂದಿಗೆ ರೈಲ್ವೆ ನಿಲ್ದಾಣದ ಬಳಿಗೆ ಆಗಮಿಸಿದ್ದಾರೆ.
ಇನ್ನು ಇತ್ತ ಸರ್ಕಾರ ನೀಡಿರುವ ಭರವಸೆ ಮೂರು ತಿಂಗಳಾದರೂ ಈಡೇರಿಸದ ಹಿನ್ನೆಲೆ ಮತ್ತೆ ಸಾರಿಗೆ ನೌಕರರು ಪ್ರತಿಭಟನೆಗಿಳಿಯಲು ಸಜ್ಜಾಗಿದ್ದಾರೆ. 6ನೇ ವೇತನ ಆಯೋಗ ಮತ್ತು ಕಳೆದ ಡಿಸೆಂಬರ್ ನಲ್ಲಿ ಧರಣಿ ನಡೆಸಿದ್ದ ವೇಳೆ ಸರ್ಕಾರ ನೀಡಿದ್ದ 9 ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಫ್ರೀಡಂಪಾರ್ಕ್ ನಲ್ಲಿ ಪ್ರತಿಭಟನೆ ಸತ್ಯಾಗ್ರಹವನ್ನ ಹಮ್ಮಿಕೊಂಡಿದ್ದಾರೆ. ವಾರದ ರಜೆ ಇರುವವರು ಮಾತ್ರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಸೂಚನೆ ನೀಡಲಾಗಿದೆ.
ಇನ್ನು ಸಾರಿಗೆ ನೌಕರರು ಮತ್ತು ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಹಿನ್ನೆಲೆ ಮೆಜೆಸ್ಟಿಕ್,.ಕೆಜಿ ರೋಡ್, ಆನಂದ್ ರಾವ್ ಸರ್ಕಲ್, ನೃಪತುಂಗ ರೋಡ್, ಸೇರಿ ಹಲವು ರಸ್ತೆಗಳಲ್ಲಿ ಸಾರ್ವಜನಿಕರಿಗೆ ಟ್ರಾಫಿಕ್ ಬಿಸಿ ತಟ್ಟುವ ಸಾಧ್ಯತೆ ಇದೆ.
Key words: Protest – Bengaluru-Traffic jam -roads.