ಮೈಸೂರು,ಮಾರ್ಚ್,18,2021(www.justkannada.in): ಎಲ್ ಐಸಿಯ ಐಪಿಓ ಮತ್ತು ವಿಮಾ ಕ್ಷೇತ್ರದಲ್ಲಿ ಎಫ್ ಡಿಐ ಹೆಚ್ಛಳ ವಿರೋಧಿಸಿ ಮೈಸೂರಿನಲ್ಲಿ ವಿವಿಧ ಸಂಘಟನೆಗಳ ನೌಕರರು, ಅಧಿಕಾರಿಗಳು ಪ್ರತಿಭಟನೆ ನಡೆಸಿದರು.
ಇತ್ತೀಚಿನ ಕೇಂದ್ರ ಬಜೆಟ್ ನಲ್ಲಿ ವಿಮಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಸ್ತಾಪಿಸಲಾದ IPO ಮೂಲಕ LIC ಯನ್ನು ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡುವುದು, ಇದಕ್ಕೆ ಅಗತ್ಯ LIC ಕಾಯ್ದೆಗೆ ತಿದ್ದುಪಡಿಗಳನ್ನು, ವಿಮಾ ಕ್ಷೇತ್ರದಲ್ಲಿ FDI ಶೇ.49 ರಿಂದ 74 ಕ್ಕೆ ಹೆಚ್ಚಳವನ್ನು ಹಣಕಾಸು ಮಸೂದೆಯಲ್ಲಿ ಸೇರಿಸಿರುವುದನ್ನು ವಿರೋಧಿಸಿ ದೇಶಾದ್ಯಂತ ವಿಮಾ ನೌಕರರು, ಅಧಿಕಾರಿಗಳು ಇಂದು ಒಂದು ದಿನದ ಮುಷ್ಕರ ನಡೆಸುತ್ತಿದ್ದಾರೆ.
ಇನ್ನು ಮೈಸೂರಿನ ಬನ್ನಿಮಂಟಪದಲ್ಲಿರುವ ,ಜೀವ ವಿಮಾ ವಿಭಾಗೀಯ ಕಛೇರಿಯ ಎದುರು ವಿವಿಧ ಸಂಘಟನೆಗಳ ನೌಕರರು, ಅಧಿಕಾರಿಗಳು ಪ್ರತಿಭಟನೆ ನಡೆಸಿದರು.
ಎಲ್ ಐಸಿ IPO ಸ್ಥಾಪನಾ ಉದ್ದೇಶಗಳನ್ನು ಉಲ್ಲಂಘಿಸುತ್ತದೆ. ಎಲ್ ಐಸಿಯಲ್ಲಿ ಬಂಡವಾಳ ಹಿಂತೆಗೆತದ ಕ್ರಮವು ಆರ್ಥಿಕತೆ ಮತ್ತು ಭಾರತೀಯ ಜನರ ದುರ್ಬಲ ವರ್ಗಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಭಾರತೀಯರಿಗಾಗಿ ಭಾರತೀಯ ರಚಿಸಿದ ದೇಶಿಯ ಸಂಸ್ಥೆಯಾಗಿದೆ. ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಯಾವುದೇ ರೀತಿಯ ಸಹಾಯ ಮಾಡುವುದಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈ ಎಲ್ಲಾ ಪ್ರಸ್ತಾಪಗಳನ್ನು ಹಿಂಪಡೆಯಬೇಕು ಎಂದು ಈ ಮೂಲಕ ಆಗ್ರಹಿಸಿದ್ದಾರೆ.
Key words: Protest – FDI – LIC -IPO – insurance sector-mysore