ಮಾಜಿ ಶಾಸಕ ಸಂಜಯ್ ಪಾಟೀಲ್ ವಿರುದ್ಧ ಕೆಪಿಸಿಸಿ ಮಹಿಳಾ ಘಟಕದಿಂದ ಪ್ರತಿಭಟನೆ.

ಬೆಂಗಳೂರು,ಅಕ್ಟೋಬರ್,1,2021(www.justkannada.in): ಕೀಳುಮಟ್ಟದ ಭಾಷೆ ಬಳಸಿದ ಆರೋಪದ ಮೇಲೆ ಮಾಜಿ ಶಾಸಕ ಸಂಜಯ್ ಪಾಟೀಲ್ ವಿರುದ್ಧ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕೀಳುಮಟ್ಟದ ಭಾಷೆ ಬಳಸಿದ ಬಿ.ಜೆ.ಪಿ.ಪಕ್ಷದ ಮಾಜಿ ಶಾಸಕ ಸಂಜಯ್ ಪಾಟೀಲ್ ವಿರುದ್ದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಬಿಬಿಎಂಪಿ ಮಾಜಿ ಮೇಯರ್ ಜಿ.ಪದ್ಮಾವತಿ, ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ವಿಮಲ ವೆಂಕಟ್ ,ಉಮಾಬಾಯಿ ಸೆಲ್ಮಾತಾಜ್ ,ಪಲ್ಲವಿಪ್ರಭು  ಜಿಲ್ಲಾ ಮಹಿಳಾ ಕಾಂಗ್ರೆಸ್ ನ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಪ್ರತಿಭಟನೆ ವೇಳೆ ಮಾತನಾಡಿದ  ಮಾಜಿ ಮೇಯರ್, ಜಿ.ಪದ್ಮಾವತಿ, ದೇಶಭಕ್ತಿ ,ಸಂಸ್ಕೃತಿ ಎಂಬ ಬಡಾಯಿ ಕೊಚ್ಚಿಕೊಳ್ಳುವ ಬಿ.ಜೆ.ಪಿ ಎಂಬ ರಾಷ್ಟೀಯ ಪಕ್ಷದಲ್ಲಿ ಮಹಿಳೆಯರಿಗೆ ಗೌರವವಿಲ್ಲ .ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರು ಮಹಿಳೆಯರು ಒಂಟಿಯಾಗಿ ಮಧ್ಯರಾತ್ರಿ ಓಡಾಡಿದರೆ ಆಗ ದೇಶಕ್ಕೆ ಸ್ವಾತಂತ್ಯ್ರ ಬಂದ್ದಂತೆ ಎಂದು ಹೇಳಿದ್ದರು. ಅದರೆ ಇಂದು ಬಿ.ಜೆ.ಪಿ.ಪಕ್ಷದಲ್ಲಿ ಹಲವಾರು ರಾಜಕಾರಣಿಗಳು ಅತ್ಯಾಚಾರ, ಮಾನಹಾನಿ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ . ಸಂಜಯ್ ಪಾಟೀಲ್ ರವರು ಕೀಳು ಮಟ್ಟದ ಭಾಷೆ ಬಳಸಿರುವ ನೋಡಿದರೆ ಅವರ ಸಂಸ್ಕೃತಿ ತಿಳಿಯುತ್ತದೆ. ಕಾಂಗ್ರೆಸ್ ಪಕ್ಷ ಮಹಿಳೆಯರನ್ನ ಗೌರವದಿಂದ ಕಾಣುವ ಪಕ್ಷ ಇಂದಿರಾಗಾಂಧಿರವರು 16ವರ್ಷ ಪ್ರಧಾನಿಯಾಗಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದರು. ಮಹಿಳೆಯರು ಇನ್ನು ಮುಂದೆ ಅರಿತುಕೊಳ್ಳಬೇಕು ಮಹಿಳೆಯರನ್ನ ಅಗೌರವದಿಂದ ಕಾಣುವ ಬಿ.ಜೆ.ಪಿ.ಪಕ್ಷವನ್ನು ಬೆಂಬಲಿಸಬಾರದು ಎಂದು ಹೇಳಿದರು.

Key words: Protest – KPCC- women’s- unit –against- former MLA -sanjay Patil