ಮೈಸೂರು,ಸೆಪ್ಟಂಬರ್,2,2022(www.justkannada.in): ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತೀಯ ಜಿವ ವಿಮೆ ನಿಗಮದ ಒಕ್ಕೂಟ, ಭಾರತೀಯ ಜೀವ ವಿಮಾ ನಿಗಮ, ಶಾಖೆ -2 ಮೈಸೂರು ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಬನ್ನಿ ಮಂಟಪದ ಬಳಿ ಇರುವ ಭಾರತೀಯ ಜೀವ ವಿಮಾ ನಿಗಮ ಶಾಖೆ-2ರ ಕಚೇರಿಯ ಮುಂಭಾಗ ಏಜೆನ್ಸಿಯ ನಾಯಕರು, ಸದಸ್ಯರು ಪ್ರತಿಭಟನೆ ನಡೆಸಿ ವಿವಿಧ ಬೇಡಿಕೆಗಳಿಗೆ ಅನುಮೋದನೆ ನೀಡುವಂತೆ ಆಗ್ರಹಿಸಿದರು.
ಪಾಲಿಸಿಗಳ ಮೇಲಿನ ಲಾಭಾಂಶವನ್ನ ಏರಿಸುವುದು, ಪಾಲಿಸಿ ಮೇಲಿನ ಸಾಲದ ಬಡ್ಡಿಯನ್ನ ಕಡಿತಗೊಳಿಸುವುದು, ಐದು ವರ್ಷ ಮೇಲ್ಪಟ್ಟ ರದ್ಧಾದ ಪಾಲಿಸಿಗಳನ್ನ ಪುನಶ್ಚೇತನಗೊಳಿಸುವುದು, ಗ್ರಾಹಕರು ಹಿಂದಿರುಗಿ ಪಡೆಯದ ಮೊತ್ತವನ್ನ ಗ್ರಾಹಕರ ಕಲ್ಯಾಣಕ್ಕೆ ಉಪಯೋಗಿಸುವುದು. ಜೀವ ವಿಮಾ ನಿಗಮದಲ್ಲಿ ಒಮ್ಮೆ ಮಾತ್ರ KYCಯನ್ನ ಪಡೆಯುವುದು. ಗ್ರಾಚುಟಿ ಮೊತ್ತವನ್ನ 10 ಲಕ್ಷಕ್ಕೆ ಏರಿಸುವುದು, ಆನ್ ಲೈನ್ ನಲ್ಲಿ ನೀಡುತ್ತಿರುವ ಪಾಲಿಸಿಗಳಿಗೆ ರಿಯಾಯಿತಿ ರದ್ದುಗೊಳಿಸುವುದು ಸೇರಿ ಹಲವು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಿನ್ನೆಯಿಂದ ಸೆಪ್ಟಂಬರ್ 7ರವರೆಗೂ ಬೆಳಿಗ್ಗೆ 10ರಿಂದ ಮಧ್ಯಾಹ್ನ 2ರವರೆಗೂ ಎಲ್ ಐಸಿ ಪ್ರತಿನಿಧಿಗಳು ಪ್ರತಿಭಟನೆ ಕೈಗೊಂಡಿದ್ದಾರೆ.
Key words: Protest –Life- Insurance -Corporation -India -Mysore