ದೆಹಲಿ ರೈತ ಹೋರಾಟ ಬೆಂಬಲಿಸಿ ರೈಲು ತಡೆಗೆ ಯತ್ನ: ರೈತಮುಖಂಡರ ಬಂಧನ

ಮೈಸೂರು,ಡಿಸೆಂಬರ್,18,2024 (www.justkannada.in): ದೆಹಲಿ ರೈತ ಮುಖಂಡರ ಹೋರಾಟಕ್ಕೆ ಬೆಂಬಲಿಸಿ ರೈಲು ತಡೆ ನಡೆಸಲು ಮುಂದಾದ ರೈತ ಮುಖಂಡರನ್ನ ಪೊಲೀಸರು ಬಂಧಿಸಿದರು.

ಮೈಸೂರಿನಲ್ಲಿ ರೈತ ಮುಖಂಡ ಕುರುಬೂರು ಶಾಂತಕುಮಾರ್  ನೂರಾರು ರೈತರು ರೈಲು ತಡೆ ಚಳುವಳಿ ನಡೆಸಲು ಮುಂದಾದಾಗ ಪೊಲೀಸರು ತಡೆದಿದ್ದು ಈ ವೇಳೆ ಮಾತಿನ ಚಕಮಕಿ ನಡೆಯಿತು. ಈ ಸಮಯದಲ್ಲಿ  ಪೊಲೀಸ್ ದಬ್ಬಾಳಿಕೆಗೆ ಧಿಕ್ಕಾರ. ರೈತ ವಿರೋಧಿ ಕೇಂದ್ರ ಸರ್ಕಾರಕ್ಕೆ ದಿಕ್ಕಾರ. ರೈತರ ಕಷ್ಟ ನಿಗಿಸಿ ಅನ್ನದ ಋಣ ತೀರಿಸಿ ಎಂದು ಪ್ರತಿಭಟನಾನಿರತ ರೈತ ಮುಖಂಡರು ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ  ರೈತ ಮುಖಂಡ ಕುರುಬೂರು ಶಾಂತಕುಮಾರ್. ಚಳುವಳಿ ಮಾಡುವ ಮೊದಲೇ ನಮ್ಮನ್ನು ತಡೆಯುವುದು ಯಾತಕ್ಕಾಗಿ. ಯಾವ ಕಾನೂನಿನಲ್ಲಿ ನಿಮಗೆ ಈ ರೀತಿ ಅವಕಾಶ ಇದೆ ಎಂಬುದನ್ನು ತಿಳಿಸಿ ಎಂದು ರೈಲ್ವೆ ಪೊಲೀಸ್ ಅಧಿಕಾರಿಗಳಿಗೆ ರಾಜ್ಯದ ಪೊಲೀಸ್ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

ಕೇಂದ್ರ ಸರ್ಕಾರಕ್ಕೆ ರೈತರು ಸತ್ತರೆ ಚಿಂತೆ ಇಲ್ಲ.  ಅಂಬಾನಿ ಅದಾನಿ ಬದುಕುಳಿದರೆ ಸಾಕು ಎನ್ನುವಂತಿದೆ. ರೈತರ ಸಾವು ನಿರೀಕ್ಷೆ ಮಾಡುತ್ತಿದೆ. ಅದಕ್ಕಾಗಿಯೇ ಸಮಸ್ಯೆ ಬಗ್ಗೆ ನಿರ್ಲಕ್ಷ ತೋರುತ್ತಿದೆ. ಜನರಿಂದ ಆಯ್ಕೆಯಾದ ಎಂಪಿಗಳು ರೈತರ ವಿಷಯದಲ್ಲಿ ಎಮ್ಮೆಗಳಂತೆ ವರ್ತಿಸುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ. ಹಳ್ಳಿಗಳಿಗೆ ಬಂದರೆ ಉಗಿಯುವ ಚಳುವಳಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸುತ್ತಿದ್ದೇನೆ ಎಂದು ಕುರುಬೂರು ಶಾಂತಕುಮಾರ್ ಕಿಡಿಕಾರಿದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಹಳ್ಳಿ ದೇವರಾಜ್ ನೇತೃತ್ವದ ಮತ್ತೊಂದು ರೈತರ ತಂಡ ಬಂಬೂ ಬಜಾರ್ ಕಡೆಯಿಂದ ರೈಲ್ವೆ ಹಳಿಗಳ ಮೇಲೆ ಹತ್ತಿ ರೈಲು ತಡೆ ನಡೆಸಲು ಯತ್ನಿಸಿದಾಗ ಪೊಲೀಸರು ಬಂಧಿಸಿದರು.

ರೈಲು ತಡೆ ಪ್ರತಿಭಟನೆಯಲ್ಲಿ ಅತ್ತಹಳ್ಳಿ ದೇವರಾಜ್, ಪಿ ಸೋಮಶೇಖರ್ ಕಿರಗಸೂರ್ ಶಂಕರ್, ಬರಡನಪುರ ನಾಗರಾಜ್,  ನೀಲಕಂಠಪ್ಪ, ವೆಂಕಟೇಶ್,  ಸಿದ್ದೇಶ್,  ವಿಜೇಯೆಂದ್ರ,  ರಾಜೇಶ್, ಮಂಜುನಾಥ್,  ಪ್ರಸಾದ್ ನಾಯ್ಕ್, ಪ್ರದೀಪ್. ಮಹದೇವಸ್ವಾಮಿ,  ಪ್ರಭುಸ್ವಾಮಿ ಸೇರಿದಂತೆ ಮುಂತಾದವರಿದ್ದರು.

Key words: block train,protest,  Mysore, farmers