ಮೈಸೂರು, ಫೆಬ್ರವರಿ,3,2021(www.justkannada.in): ಕೇಂದ್ರದ ಕೃಷಿಕಾಯ್ದೆ ವಿರೋಧಿಸಿ ರೈತರು ಹೋರಾಟ ನಡೆಸುತ್ತಿದ್ದು ಈ ಮಧ್ಯೆ ಫೆಬ್ರವರಿ 6 ರಂದು ರಾಷ್ಟ್ರೀಯ , ರಾಜ್ಯ ಹೆದ್ಧಾರಿ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಬಡಗಲಪುರ ನಾಗೇಂದ್ರ, ಫೆಬ್ರವರಿ 6 ರಂದು ಮೂರು ಗಂಟೆಗಳ ಕಾಲ ರಸ್ತೆ ತಡೆದು ಹೋರಾಟ ಮಾಡುತ್ತೇವೆ. ಇದನ್ನ ದೆಹಲಿಯಲ್ಲಿ ಕಿಸಾನ್ ಸಂಘಟನೆ ಕರೆ ನೀಡಿದೆ. ಮಧ್ಯಾಹ್ನ 12 ರಿಂದ 3ರ ವರೆಗೆ ಈ ಹೋರಾಟ ನಡೆಸುತ್ತೇವೆ ಎಂದು ಮಾಹಿತಿ ನೀಡಿದರು.
ನಮಗೆ ಈ ಹೋರಾಟಕ್ಕೆ ಯಾವುದೇ ಅನುಮತಿ ಇಲ್ಲ. ಆದರು ನಾವು ನಮ್ಮ ಹೋರಾಟ ಮಾಡುತ್ತೇವೆ. ಅವರಿಗೆ ಮಾಹಿತಿ ನೀಡಿ ನಮ್ಮ ಹೋರಾಟ ಮಾಡುತ್ತೇವೆ. ಆದರೆ ನಮ್ಮನ್ನ ಅವರು ಅರೆಸ್ಟ್ ಮಾಡಿದರು ಸರಿ. ನಾವು ಎಲ್ಲದಕ್ಕೂ ಸಿದ್ದವಾಗಿ ಹೋರಾಟ ಮಾಡುತ್ತೇವೆ ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.
ಸರ್ಕಾರ ಹತಾಶೆಯ ಪ್ರತೀಕದಿಂದ ರೈತರ ಜೊತೆ ಹೀಗೆ ವರ್ತಿಸುತ್ತಿದೆ. ಇದು ಫ್ಯಾಸಿಸ್ಟ್ ಸರ್ಕಾರದ ನಡೆಯಂತಿದೆ. ಗಡಿ, ಭಾಷೆ, ರಾಜ್ಯ ಮೀರಿ ಈ ಪ್ರತಿಭಟನೆ ನಡೆಯುತ್ತಿದೆ. ಹತಾಶೆಯ ಫಲವನ್ನ ಶೀಘ್ರದಲ್ಲೇ ಈ ಸರ್ಕಾರ ಉಣ್ಣುತ್ತೆ ಎಂದು ರೈತ ಮುಖಂಡ ಬಡಗಲಪುರ ನಾಗೇಂದ್ರ ಹೇಳಿದರು.
Key words: protest- National – State Highway-farmer leader- Badagalpura Nagendra-mysore