ಬೆಂಗಳೂರು,ಆಗಸ್ಟ್,1,2022(www.justkannada.in): ಸಿಇಟಿ ಫಲಿತಾಂಶದಲ್ಲಿ ರಿಪಿಟರ್ಸ್ ಗೆ ಅನ್ಯಾಯ ಆಗಿದೆ ಎಂದು ಆರೋಪಿಸಿ ಸಿಇಟಿ ರಿಪಿಟರ್ಸ್ ವಿದ್ಯಾರ್ಥಿಗಳು ಮತ್ತು ಪೋಷಕರು ಇಂದು ಪ್ರತಿಭಟನೆ ನಡೆಸಿದರು.
ಮಲ್ಲೇಶ್ವರಂನಲ್ಲಿರುವ ಪರೀಕ್ಷಾ ಪ್ರಾಧಿಕಾರದ ಮುಂದೆ ಸಿಎಇಟಿ ರಿಪೀಟರ್ ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದರು. ಸಿಇಟಿ ಅಂಕದ ಜತೆ ಪಿಯುಸಿ ಅಂಕ ಸೇರಿಸಿದೇ ಅನ್ಯಾಯ ಮಾಡಲಾಗಿದೆ. ಕಳೆದ ವರ್ಷ ಕೊರೋನಾದಿಂದ ಪರೀಕ್ಷೆ ರದ್ದಾಗಿತ್ತು. ಆಗ ಕೇವಲ ಸಿಇಟಿ ಅಂಕ ಮಾತ್ರ ಪರಿಗಣನೆ ಮಾಡಲಾಗಿತ್ತು.
ಈ ವರ್ಷ ಸಿಇಟಿ ಅಂಕದ ಜೊತೆ ಪಿಯು ಮಾರ್ಕ್ಸ್ ಪರಿಗಣಿಸಿದ್ದಾರೆ. ಆದರೆ ಸಿಇಟಿ ರಿಪಿಟರ್ಸ್ ವಿದ್ಯಾರ್ಥಿಗಳಿಗೆ ಪಿಯು ಅಂಕ ಸೇರಿಸಿದೆ ಅನ್ಯಾಯ ಮಾಡಿದ್ದಾರೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
Key words: Protest -students – CET -repeaters – parents – Bangalore.