ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದುಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ನವೆಂಬರ್,19,2020(www.justkannada.in) : ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ರದ್ದುಪಡಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

kannada-journalist-media-fourth-estate-under-loss

ಜಿಲ್ಲಾಧಿಕಾರಿಗಳ ಕಚೇರಿ ಬಳಿ ಗುರುವಾರ ಜಮಾವಣೆಗೊಂಡ ಪ್ರತಿಭಟನಕಾರರು ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದುಪಡಿಸುವಂತೆ ಆಗ್ರಹಿಸಿ ವಿವಿಧ ಘೋಷಣೆಗಳನ್ನು ಕೂಗಿದರು.

ರಾಜ್ಯಾಧ್ಯಕ್ಷ ಪಿ.ಕೃಷ್ಣೇಗೌಡ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಕೊಚ್ಚಿಹೋಗಿರುವ, ಅತಿ ಮಳೆಯಿಂದ ಬೆಳೆ ನಾಶವಾಗಿರುವವರಿಗೆ ಪರಿಹಾರ ನೀಡದ ಸರಕಾರ ಮತ ಬೇಟೆಗಾಗಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ಮೂಲಕ ಮರಾಠಿಗರನ್ನು ಒಲಿಸಿಕೊಳ್ಳಲು ಹೊರಟಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಸರಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಮರಾಠಿಗರು ಎಲ್ಲೂ ಕೂಡ ಸ್ವಾಗತಿಸಿಲ್ಲ. ಪ್ರಾಧಿಕಾರ ರಚನೆಗೆ ಎಲ್ಲೂ ವಿಜಯೋತ್ಸವ ಆಚರಿಸಿದ್ದು ಕಂಡು ಬಂದಿಲ್ಲ. ಇದರಿಂದ ಮರಾಠಿಗರಿಗೆ ಪ್ರಾಧಿಕಾರದ ಅವಶ್ಯಕತೆ ಇಲ್ಲದಿರುವುದು ಸ್ಪಷ್ಟವಾಗುತ್ತದೆ. ಈ ಕೂಡಲೇ ರಾಜ್ಯ ಸರಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿರುವ 50 ಕೋಟಿ ರೂ. ಹಣವನ್ನು ಪ್ರವಾಹ ಪೀಡಿತರಿಗೆ ಮತ್ತು ಉತ್ತರ ಕರ್ನಾಟಕದ ನೊಂದ ರೈತರಿಗೆ ನೀಡುವ ಮೂಲಕ ರಾಜ್ಯದ ಹಿತ  ಕಾಪಾಡಬೇಕು ಎಂದು ಆಗ್ರಹಿಸಿದರು.

ಮರಾಠಿಗರ ಪ್ರಾಧಿಕಾರವನ್ನು ರಚನೆ ಮಾಡಿದ್ದೇ,ಆದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು. ಮರಾಠಿಗರ ಬೇಡಿಕೆಗಳನ್ನು ಸರಕಾರ ಪರಿಶೀಲನೆ ಮಾಡಿ ಬೇಡಿಕೆಗಳನ್ನು ಈಡೇರಿಸಲಿ, ಪ್ರಾಧಿಕಾರವನ್ನು ರಚಿಸಬಾರದೆಂದು ಒತ್ತಾಯಿಸಿದರು.

Protest,demanding,abolition,Maratha,Development,Authority

ಪ್ರತಿಭಟನೆಯಲ್ಲಿ ಜಗದೀಶ್ ಎಂ, ಹರೀಶ್, ಸಚಿನ್, ಸ್ವಾಮಿಗೌಡ, ಚಂದನ್, ರಮೇಶ್, ಶೀತಲ್ ಇತರರು ಭಾಗವಹಿಸಿದ್ದರು.

key words : Protest-demanding-abolition-Maratha-Development-Authority