ಮೈಸೂರು,ಅಕ್ಟೋಬರ್,23,2020(www.justkannada.in) : ಪರಿಶಿಷ್ಟ ಪಂಗಡಕ್ಕೆ ಜನಸಂಖ್ಯೆಗೆ ಅನುಗುಣವಾಗಿ 7.5% ಮೀಸಲಾತಿ ನೀಡಲು ನಿವೃತ್ತ ನ್ಯಾಯಾಧೀಶರಾ ನ್ಯಾ.ನಾಗಮೋಹನ್ ದಾಸ್ ಅವರು ನೀಡಿದ್ದು, ಈ ವರದಿಯನ್ನು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿ ಮೀಸಲಾತಿ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಪುರಭವನದ ಎದುರಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಎದುರು ಜಮಾವಣೆಗೊಂಡ ಪ್ರತಿಭಟನಕಾರರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು.
ಸೇನೆಯ ರಾಜ್ಯಾಧ್ಯಕ್ಷರಾದ ದೇವರಾಜ್ ಟಿ ಕಾಟೂರು ಮಾತನಾಡಿ, ಶ್ರೀ ಪಸನ್ನನಂದ ಸ್ವಾಮೀಜಿ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಮೀಸಲಾತಿ ಅನುಷ್ಠಾನ ಮಾಡಬೇಕು ಮತ್ತು ಎಸ್ಟಿಗೆ ಪ್ರತೇಕ ಸಚಿವಾಲಯ ಸ್ಥಾಪಿಸಬೇಕೆಂದು ಅಗ್ರಹಿಸಿದರು.
ಪ್ರತಿಭಟನೆಯಲ್ಲಿ ಸೇನೆಯ ಪದಾಧಿಕಾರಿಗಳಾದ ಶಿವಕುಮಾರಸ್ವಾಮಿ, ಉದ್ಬೂರು ಸೋಮಣ್ಣ, ನೃಪತುಂಗ, ಬಂಡಳ್ಳಿ ಕುಮಾರ್, ಹೆಡತಲೆ ಶಿವಕುಮಾರ್, ಗೋವಿಂದಸ್ವಾಮಿ ಇತರರು ಭಾಗವಹಿಸಿದ್ದರು.
key words : Protest-increase-reservation-ST-7.5%-depending-population