ಬೆಂಗಳೂರು,ಅ,22,2019(www.justkannada.in): ಬಿಇಎಂಎಲ್ ಖಾಸಗೀಕರಣದ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಬಿಇಎಂಎಲ್ ಕಾರ್ಖಾನೆ ಕಾರ್ಮಿಕರು ಇಂದು ಪ್ರತಿಭಟನೆ ನಡೆಸಿದರು.
ನ್ಯೂ ತಿಪ್ಪಸಂದ್ರದಲ್ಲಿರುವ ಬಿಇಎಂಎಲ್ ಕಾರ್ಖಾನೆ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಹೀಗಾಗಿ ಕೇಂದ್ರದ ವಿರುದ್ದ ಕಂಪನಿ ನೌಕರರು ಧರಣಿ ನಡೆಸಿದರು. ಮೆಟ್ರೋ ಬೋಗಿಗಳನ್ನು ತಯಾರಿಸುವ ಕೇಂದ್ರ ಸರ್ಕಾರದ ಏಕೈಕ ಸಾರ್ವಜನಿಕ ಉದ್ಯಮ ಇದಾಗಿದ್ದು, ಇದನ್ನ ಕೇಂದ್ರ ಸರ್ಕಾರದಿಂದ ಖಾಸಗಿಯವರಿಗೆ ಮಾರಾಟ ಮಾಡಲು ಚಿಂತನೆ ನಡೆಸಿದೆ. ಈಗಾಗಲೇ ಬಿಇಎಂಎಲ್ ಕಂಪನಿ ಖಾಸಗಿಕರಣಕ್ಕೆ ಕ್ಯಾಬಿನೆಟ್ ನಲ್ಲಿ ಅನುಮತಿ ಕೂಡ ಸಿಕ್ಕಿದೆ. ಇದನ್ನು ವಿರೋಧಿಸಿ ಇಂದು ಕಾರ್ಮಿಕರು ಧರಣಿ ಸತ್ಯಾಗ್ರಹ ಮಾಡಿದರು.
ಬಿಇಎಂಎಲ್ ಬೆಂಗಳೂರು ಕಂಪನಿಯಲ್ಲಿ 1800 ನೌಕರರಿದ್ದಾರೆ. ರಾಜ್ಯದಲ್ಲಿರುವ ಒಟ್ಟು ಬಿಇಎಂಎಲ್ ಕಂಪನಿಗಳಿಂದ ಆರು ಸಾವಿರ ಕಾರ್ಮಿಕರಿದ್ದಾರೆ. ಬಿಇಎಂಎಲ್ ಸದ್ಯ 46 ರಷ್ಟು ಖಾಸಗಿ ಷೇರು ಹೊಂದಿದೆ. ಪ್ರಧಾನಿ ಮೋದಿ ಸರ್ಕಾರದ ಎನ್ ಡಿ ಎ 1 ರಲ್ಲಿ ಹೆಚ್ಚುವರಿಯಾಗಿ 26 ಶೇಕಡಾ ಷೇರು ಮಾರಾಟಕ್ಕೆ ಸರ್ಕಾರ ತೀರ್ಮಾನಿಸಲಾಗಿತ್ತು. ನಂತರ ತೀವ್ರ ಪ್ರತಿಭಟನೆ ವ್ಯಕ್ತವಾದ ಹಿನ್ನಲೆ ತನ್ನ ನಿರ್ಧಾರದಿಂದ ಹಿಂದೆ ಸರಿದಿತ್ತು. ಆದರೆ ಈಗ ಮತ್ತೆ ನೂರಕ್ಕೆ ನೂರರಷ್ಟು ಷೇರುಗಳನ್ನ ಖಾಸಗಿಯವರಿಗೆ ಮಾರಾಟ ಮಾಡಲು ಕೇಂದ್ರ ಮುಂದಾಗಿದೆ.
ಹೀಗಾಗಿ ಕೇಂದ್ರದ ಧೋರಣೆ ಖಂಡಿಸಿ ನೌಕರರು ಪ್ರತಿಭಟನೆ ನಡೆಸಿದರು. ಬೆಂಗಳೂರು ಕೆಜಿಎಫ್ ಹಾಗೂ ಮೈಸೂರಿನಲ್ಲಿರುವ ಬೆಮಲ್ ಕಂಪನಿಗಳು3500 ಕೋಟಿ ವಾರ್ಷಿಕ ಟರ್ನೋವರ್ ಹೊಂದಿರೋ ಬಿಇಎಂಎಲ್ ಲಾಭದಲ್ಲಿದಲ್ಲಿದ್ದರೂ ಕಂಪನಿ ಖಾಸಗಿಯವರಿಗೆ ಮಾರಾಟ ಮಾಡುತ್ತಿರುವ ಕೇಂದ್ರದ ನೀತಿಗೆ ಭಾರಿ ವಿರೋಧ ವ್ಯಕ್ತವಾಗಿದೆ.
Key words: Protests – workers –against- central government -privatization -BEML