ಬೆಂಗಳೂರು,ಜು,20,2019(www.justkannada.in):. ಬಹುಮತ ಸಾಭೀತು ಮಾಡಿ ಇಲ್ಲಿದ್ದರೇ ರಾಜೀನಾಮೆ ಕೊಡಿ. ನಿಮಗೆ ನೈತಿಕತೆ ಇದ್ದರೇ ಅಧಿಕಾರ ಬಿಟ್ಟು ಹೋಗಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಕಿಡಿಕಾರಿದರು.
ಬೆಂಗಳೂರಿನ ರಮಡ ರೆಸಾರ್ಟ್ ನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಬಿಎಸ್ ಯಡಿಯೂರಪ, ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿದೆ. ಈ ಸರ್ಕಾರ ಮುಂದುವರೆಯಲು ಯಾವುದೇ ನೈತಿಕತೆ ಇಲ್ಲ. ರಾಜ್ಯಪಾಲರ ನಿರ್ದೇಶಕ್ಕೂ ಕ್ಯಾರೆ ಎನ್ನುತ್ತಿಲ್ಲ. ಎರಡು ಬಾರಿ ರಾಜ್ಯಪಾಲರು ಸೂಚಿಸಿದ್ದರೂ ಸಿಎಂ ವಿಶ್ವಾಸಮತಯಾಚಿಸಿಲ್ಲ. ಹಾಗೆಯೇ ರಾಜ್ಯದಲ್ಲಿ ಬರ ಇದೆ ಅದಕ್ಕೂ ಅದ್ಯತೆ ಕೊಡ್ತಿಲ್ಲ. ಬಹುಮತ ಇದ್ದರೆ ಸಾಬೀತು ಮಾಡಿ. ಇಲ್ಲದಿದ್ದರೇ ರಾಜೀನಾಮೆ ಕೊಡಿ. ಬಹುಮತ ಇಲ್ಲದಿದ್ದರೇ ಸಿಎಂ ಒಂದು ಕ್ಷಣ ಆ ಸ್ಥಾನದಲ್ಲಿ ಇರಬಾರದು ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ನಮ್ಮ ಶಾಸಕರನ್ನ ಕಿಡ್ನಾಪ್ ಮಾಡಿದೆ ಎಂದು ಆರೋಪಿಸಿದ್ದ ಸಚಿವ ಡಿ.ಕೆ ಶಿವಕುಮಾರ್ ಗೆ ತಿರುಗೇಟು ನೀಡಿದ ಬಿ.ಎಸ್ ಯಡಿಯೂರಪ್ಪ, ಶಾಶಕರನ್ನ ಕಿಡ್ನಾಪ್ ಮಾಡಿದ್ದಾರೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ. ಅವರು ತಕ್ಷಣ ಕ್ಷಮೆ ಕೇಳಬೇಕು. ಫೋಟೊ ತೆಗೆದುಕೊಂಡು ನಿನ್ನೆ ಸದನದಲ್ಲಿ ದಾಂಧಲೆ ಮಾಡಿದ್ದಾರೆ. ಸದನದಲ್ಲಿ ಒಬ್ಬೊಬ್ಬ ಶಾಸಕರಿಗೆ ಒಂದೊಂದು ಗಂಟೆ ಮಾತನಾಡಲು ಬಿಟ್ಟಿದ್ದಾರೆ ಎಂದು ಹರಿಹಾಯ್ದರು.
Key words: Prove –majority- resign- go away-BS Yeddyurappa –cm hd kumaraswamy