ಮೈಸೂರು,ಅಕ್ಟೋಬರ್,13,2020(www.justkannada.in): ಕೊಡವ ಬುಡಕಟ್ಟು ಕುಲವನ್ನು ಪ್ರಾಚೀನ ಅದಿಮಸಂಜಾತ ಬುಡಕಟ್ಟು ಜನಾಂಗವೆಂದು ಸರ್ಕಾರ ಘೋಷಿಸಬೇಕು. ಕೊಡವರನ್ನು ಎಸ್.ಟಿ ಪಟ್ಟಿಯಲ್ಲಿ ಸೇರಿಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ನ ಅಧ್ಯಕ್ಷ ನಾಚಪ್ಪ ಆಗ್ರಹಿಸಿದರು.
ಕೊಡವರಿಗೆ ಎಸ್.ಟಿ ಟ್ಯಾಗ್ ಮೂಲಕ ರಾಜ್ಯಾಂಗ ಭದ್ರತೆ ನೀಡುವಂತೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು. ಈ ವೇಳೆ ಮಾತನಾಡಿದ ಕೊಡವ ನ್ಯಾಷನಲ್ ಕೌನ್ಸಿಲ್ ನ ಅಧ್ಯಕ್ಷ ಎಂ.ಯು.ನಾಚಪ್ಪ, ಕೊಡವ ಬುಡಕಟ್ಟು ಕುಲವನ್ನು ಪ್ರಾಚೀನ ಅದಿಮಸಂಜಾತ ಬುಡಕಟ್ಟು ಜನಾಂಗವೆಂದು ಸರ್ಕಾರ ಘೋಷಿಸಬೇಕು. ಜನರ ಆಶೋತ್ತರಗಳನ್ನು ಪರಿಗಣಿಸುವುದು ಸಂವಿಧಾನದ 7 ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ಕೊಡವರನ್ನು ಎಸ್.ಟಿ ಪಟ್ಟಿಯಲ್ಲಿ ಸೇರಿಸಬೇಕು. ಈ ಸಾಂವಿಧಾನಿಕ ಪರಿಹಾರಕ್ಕಾಗಿ ತುರ್ತಾಗಿ ಸಂವಿಧಾನ ತಿದ್ದುಪಡಿ ಕಸರತ್ತು ಮಾಡಬೇಕು. ಕೊಡವ ಬುಡಕಟ್ಟು ಕುಲಕ್ಕೆ ಎಸ್.ಟಿ ಪಟ್ಟಿಯಲ್ಲಿ ಮಾನ್ಯತೆ ದೊರಕಬೇಕು. ಆ ಮೂಲಕ ವಿನಾಶದಂಚಿನಲ್ಲಿರುವ ಸೂಕ್ಷ್ಮ ಅಲ್ಪಸಂಖ್ಯಾತ ಬುಡಕಟ್ಟನ್ನು ಜನರು ಸೇರಿದಂತೆ ಜನಪದಿಯ ಸಂಸ್ಕೃತಿ ,ಸಾಂಪ್ರಾದಾಯಿಕ ಕಾಯ್ದೆ ಪೂರ್ವಜಿತ ಭೂಮಿ ಇತ್ಯಾದಿಗಳಿಗೆ ರಾಜ್ಯಾ0ಗ ಖಾತ್ರಿ ನೀಡಬೇಕು ಎಂದು ಆಗ್ರಹಿಸಿದರು.
ಕೊಡವ ಹಕ್ಕುಗಳನ್ನು ನಿರಾಕರಣೆ ಮಾಡಬಾರದು. ಅಪ್ಪಟ ದೇಶ ಪ್ರೇಮಿಗಳಾದ ಕೊಡವರಿಗೆ ಸಂವಿಧಾನದ ಅಡಿ ಎಲ್ಲಾ ರೀತಿಯ ಭದ್ರತೆ ಕೊಡಬೇಕು ಎಂದು ನಾಚಪ್ಪ ಒತ್ತಾಯಿಸಿದರು.
Key words: Provide -Kodava – ST-State- Security – Kodava National Council- request-mysore