ಮೈಸೂರು,ಮೇ,25,2023(www.justkannada.in): ಸಿಎಂ ಸಿದ್ದರಾಮಯ್ಯ ಬಗ್ಗೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಮಾಜಿ ಸಚಿವ ಅಶ್ವತ್ ನಾರಾಯಣ್ ವಿರುದ್ಧ ಮೈಸೂರಿನ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ಅಶ್ವಥ್ ನಾರಾಯಣ್ ವಿರುದ್ಧ ದೂರು ನೀಡಿದ್ದು, ದೂರಿನನ್ವಯ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಎಂ ಸಿದ್ದರಾಮಯ್ಯಗೆ 15.02.2023 ರಂದು ಅಶ್ವಥ್ ನಾರಾಯಣ್ ಬೆದರಿಕೆ ಹಾಕಿದ ಆರೋಪದ ಮೇಲೆ 17.02.2023 ರಂದು ದೂರು ಸಲ್ಲಿಸಿದ್ದರೂ ಕ್ರಮ ಕೈಗೊಂಡಿರಲಿಲ್ಲ ಎನ್ನಲಾಗಿತ್ತು.
ಮಂಡ್ಯದ ಸಾತನೂರಿನಲ್ಲಿ ಬಿಜೆಪಿ ಕಾರ್ಯಕ್ರಮದಲ್ಲಿ ಮಾತನಾಡಿದ್ಧ ಅಶ್ವತ್ ನಾರಾಯಣ್, ಟಿಪ್ಪು ಸುಲ್ತಾನ್ ನನ್ನು ಉರಿಗೌಡ, ನಂಜೇಗೌಡರು ಹೊಡೆದು ಹಾಕಿದ ರೀತಿ ಸಿದ್ದರಾಮಯ್ಯರನ್ನ ಹೊಡೆದು ಹಾಕಿ ಎಂದು ಬಹಿರಂಗವಾಗಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು.
ಈ ಹಿಂದೆ ಕೊಡಗು ಜಿಲ್ಲೆಯಲ್ಲೂ ಸಿದ್ಧರಾಮಯ್ಯಗೆ ಕೊಲೆಗೆ ಯತ್ನ ನಡೆದಿತ್ತು. ಮಳೆ ಪ್ರವಾಹ ವೀಕ್ಷಣೆಗೆ ತೆರಳಿದ್ದ ವೇಳೆ ಒಂದು ವರ್ಗ ಕೊಲೆಗೆ ಯತ್ನ ಮಾಡಿತ್ತು. ಹೀಗಾಗಿ ಮತ್ತೊಮ್ಮೆ ಸಮಾಜ ದ್ರೋಹಿಗಳು ಸಿದ್ಧರಾಮಯ್ಯರನ್ನ ಕೊಲೆ ಮಾಡಲು ಯತ್ನಿಸುವ ಸಾಧ್ಯತೆಗಳಿವೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಪ್ರಕರಣ ದಾಖಲಿಸಿದ್ದಾರೆ.
Key words: Provocative- statement – FIR- filed -against -former minister -Ashwath Narayan.