ಹಾವೇರಿ,ಮಾರ್ಚ್,21,2023(www.justkannada.in): ಲಂಚ ಪಡೆಯುವಾಗ ಪಿಎಸ್ ಐ ಮತ್ತು ಕಾರು ಚಾಲಕ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲ್ಲೂಕಿನಲ್ಲಿ ನಡೆದಿದೆ.
ತಾಲ್ಲೂಕಿನ ಶಹರ ಪೊಲೀಸ್ ಠಾಣೆಯ ಪಿಎಸ್ ಐ ಸುನೀಲ್ ತೇಲಿ ಹಾಗೂ ಕಾರು ಚಾಲಕ ಸಚಿನ್ ಲೋಕಾಯುಕ್ತ ಬಲೆಗೆ ಬಿದ್ದವರು. ಫಿರೋಜ್ ಎಂಬುವವರಿಗೆ ಮನೆ ಬಾಡಿಗೆ ವಸೂಲಿ ಮಾಡಿಕೊಡಲು ಪಿಎಸ್ ಐ ಸುನೀಲ್ ತೇಲಿ 50 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ನಡುವೆ ಫಿರೋಜ್ ರಿಂದ 40 ಸಾವಿರ ಲಂಚ ಪಡೆಯುವಾಗ ಪಿಎಸ್ ಐ ಸುನೀಲ್ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದಾರೆ.
ಇದೀಗ ಪಿಎಸ್ ಐ ಸುನೀಲ್ ಕಾರು ಚಾಲಕ ಸಚಿನ್ ಇಬ್ಬರನ್ನ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Key words: PSI – car driver -caught – Lokayukta -trap -bribe