ಮೈಸೂರು,ಮೇ,5,2022(www.justkannada.in): ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯಿಂದ ನ್ಯಾಯಯುತ ತನಿಖೆ ಅಸಾಧ್ಯ. ಹೀಗಾಗಿ ನ್ಯಾಯಾಂಗ ತನಿಖೆ ನಡೆಸುವಂತೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಪಿಎಸ್ ಐ ನೇಮಕಾತಿ ಅಕ್ರಮದಲ್ಲಿ ಎಡಿಜಿಪಿಯೇ ಭಾಗಿಯಾಗಿದ್ದಾರೆ. ಇನ್ನು ಸಿಐಡಿಯಂದ ನ್ಯಾಯಯುತ ತನಿಖೆ ಹೇಗೆ ಸಾಧ್ಯ..? ಹೀಗಾಗಿ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆಯಾಗಲಿ ಎಂದು ಆಗ್ರಹಿಸಿದರು.
ಹಗರಣದಲ್ಲಿ ಸಚಿವರೇ ಭಾಗಿಯಾಗಿದ್ದಾರೆ. ನಿಜವಾದ ಆರೋಪಿಗಳನ್ನ ಬಂಧಿಸಿಲ್ಲ. ಮಧ್ಯವರ್ತಿಗಳನ್ನ ಮಾತ್ರ ಬಂಧಿಸಿದ್ದಾರೆ. ಅಶ್ವಥ್ ನಾರಾಯಣ್ ಕಡೆಯವರು ಇಬ್ಬರು ಇದ್ದಾರೆ. ಆಯ್ಕೆಯಾದ ದರ್ಶನ್ ಗೌಡನನ್ನ ಕರೆ ತಂದು ವಿಚಾರಣೆ ಮಾಡದೆ ಬಿಟ್ಟಿದ್ದಾರೆ. ನಿಷ್ಪಕ್ಷಪಾತ ತನಿಖೆ ಮಾಡುತ್ತಿಲ್ಲ. ನ್ಯಾಯಾಂಗ ತನಿಖೆಯಾದರೇ ಎಲ್ಲಾ ಸತ್ಯ ಹೊರ ಬರುತ್ತೆ ಎಂದರು.
ಶಾಸಕ ಪ್ರಿಯಾಂಕ್ ಖರ್ಗೆಗೆ ಸಿಐಡಿ ನೋಟೀಸ್ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ, ನೋಟಿಸ್ ನೀಡಲು ಸಿಐಡಿಗೆ ಅಧಿಕಾರವೇ ಇಲ್ಲ. ಪ್ರಿಯಾಂಖ್ ಖರ್ಗೆ ಸಾಕ್ಷಿಧಾರನಾ ಅಥವಾ ಅಪರಾಧಿನಾ..? ಸಿಐಡಿಯೇ ಪ್ರಿಯಾಂಕ್ ಖರ್ಗೆ ಬಳಿ ಹೋಗಲಿ ಎಂದು ತಿಳಿಸಿದರು.
Key words: PSI-Illegal Case – CID – investigation-impossible-former CM-Siddaramaiah
ENGLISH SUMMARY…
CID cannot do a fair investigation in PSI recruitment illegalities: Siddaramaiah demands for judicial probe
Mysuru, May 5, 2022 (www.justkannada.in): “The Criminal Investigation Department (CID) cannot do a fair investigation in the PSI recruitment illegalities case. Hence, a judicial probe should be held,” opined leader of the opposition in the assembly Siddaramaiah.
Addressing the media persons in Mysuru today, he said, “the ADGP himself is involved in this case. How can a fair probe be expected from CBI in this case? Hence, the investigation should be led by an High Court Judge.”
“The Minister is also involved in this case. The real accused have not been arrested. Only middlemen have been held. Minister Ashwathanarayana’s person is also in it. They have let Darshan Gowda go without interrogating him. The investigation is not being held properly. Truth will come out only by a judicial probe,” he said.
Keywords: Siddaramaiah/ PSI recruitment illegalities/ Judicial probe