PSI ಪರಶುರಾಮ್ ಸಾವು: ಶಾಸಕ ಸ್ಥಾನದಿಂದ ಚೆನ್ನಾರೆಡ್ಡಿ ವಜಾಗೊಳಿಸಿ, ಬಂಧಿಸಿಬೇಕು-ಸಾ.ರಾ ಮಹೇಶ್ ಆಗ್ರಹ

ಮೈಸೂರು,ಆಗಸ್ಟ್,6,2024 (www.justkannada.in): ಪಿಎಸ್ಐ ಪರುಶುರಾಮ್  ಅನುಮಾನಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸ್ಥಾನದಿಂದ ಚೆನ್ನಾರೆಡ್ಡಿ ಅವರನ್ನ ವಜಾಗೊಳಿಸಿ,  ಅವರನ್ನ ಬಂಧಿಸಿಬೇಕು ಎಂದು ಮಾಜಿ ಸಚಿವ ಸಾ.ರಾ ಮಹೇಶ್ ಆಗ್ರಹಿಸಿದರು.

ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ, ಜೆಡಿಎಸ್ ಕಾರ್ಯಾಧ್ಯಕ್ಷ ಸಾ.ರಾ ಮಹೇಶ್, 2013 ರಿಂದ 2018 ರವರೆಗೆ  ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಅವರ ಜೊತೆ ಕೆಲಸ ಮಾಡಿದ್ದೇನೆ. ನಮ್ಮ ನಾಯಕರಾದ ಕುಮಾರಸ್ವಾಮಿ ಅವರ ಜೊತೆಗೂ ಕೆಲಸ ಮಾಡಿದ್ದೇನೆ. ಆದರೆ,ಇಂತಾ ಒಂದು ವ್ಯವಸ್ಥೆ ನಾವು ಯಾವುತ್ತೂ ಕೂಡ ನೋಡಿರಲಿಲ್ಲ. ನಾವು ಎಲ್ಲಿಗೋಗ್ತಾ ಇದ್ದೀವಿ.? ಶಾಸಕ ಮತ್ತು ಅವರ ಪುತ್ರನ ಒತ್ತಡಕ್ಕೆ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂದರೆ ನಿಮ್ಮ ಆಡಳಿತ ಯಾವ ರೀತಿ ನಡೀತಾ ಇದೆ. ಈ ಕೂಡಲೇ ಶಾಸಕ  ಚೆನ್ನಾರೆಡ್ಡಿ ಪಾಟೀಲ್ ರಾಜಿನಾಮೆ ನೀಡಬೇಕು. ಅವರನ್ನ ಶಾಸಕ ಸ್ಥಾನದಿಂದ ವಜಾ ಮಾಡಬೇಕು. ಅವರನ್ನ ಬಂಧಿಸಬೇಕು.  ನನ್ನ 35 ವರ್ಷಗಳ ಅನುಭವದಲ್ಲಿ ಪೋಲಿಸರನ್ನ‌ ಯಾವತ್ತೂ ಇಷ್ಟು ಕೆಳಮಟ್ಟದಲ್ಲಿ ನಡೆಸಿಕೊಂಡಿಲ್ಲ ಎಂದು ಕಿಡಿಕಾರಿದರು.

ಪ್ಯಾಂಟ್ ಒಳಗೆ ಖಾಕಿ ಚಡ್ಡಿ ಹಾಕವ್ರೆ ಎಂಬ ಹೇಳಿಕೆ; ಸಚಿವ ಜಮೀರ್ ಗೆ ತಿರುಗೇಟು

ಎಚ್.ಡಿ ಕುಮಾರಸ್ವಾಮಿ ಅವರು ಪ್ಯಾಂಟ್ ಒಳಗೆ ಖಾಕಿ ಚಡ್ಡಿ ಹಾಕವ್ರೆ ಎಂಬ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ತಿರುಗೇಟು ಕೊಟ್ಟ ಮಾಜಿ ಸಚಿವ ಸಾರಾ ಮಹೇಶ್, 2006 ರಲ್ಲಿ ಜಮೀರ್ ಅಣ್ಣಾ ಬಸ್ ಓಡಿಸಿಕೊಂಡು ಬಂದವರು. ನಿಮ್ಮನ್ನು ಶಾಸಕ, ಸಚಿವರನ್ನಾಗಿ  ಮಾಡಿದ್ದು ದೇವೇಗೌಡರು, ಕುಮಾರಸ್ವಾಮಿ ಅವರು. ಆವಾಗ ಯಾವ ಚಡ್ಡಿ ಹಾಕಿದ್ದರು ಅಂತಾ ಗೊತ್ತಿರಲಿಲ್ವಾ.? ನಾನು ಕೂಡ ಈ ಹಿಂದೆ ಬಿಜೆಪಿಯಲ್ಲಿದ್ದೆ. ಈಗ ಜೆಡಿಎಸ್ ನಲ್ಲಿದ್ದೇನೆ. ಹಾಗಂತ ಬಿಜೆಪಿ ಅವರನ್ನ ಬಾಯಿಗೆ ಬಂದಂಗೆ ಮಾತನಾಡಿದ್ರೆ ಆಗತ್ತಾ.? ನೀವು ಈಗಾಗಲೇ ಮಂತ್ರಿ ಆಗಿದ್ದೀರಿ ಇನ್ನೇನು ಬೇಕು. ಇನ್ಯಾಕೆ ಈ ರೀತಿ ಹೇಳಿಕೆ ಕೊಟ್ಟು ಯಾರನ್ನೂ ಒಲೈಸಬೇಕು? ಎಂದು ವಾಗ್ದಾಳಿ ನಡೆಸಿದರು.

ಎಸ್ ಐಟಿ ಎಂಬ ಹೆಸರನ್ನು ಬದಲಿಸಬೇಕು. ಎಸ್ ಎಸ್ ಐ ಟಿ ಎಂದು ಬದಲಿಸಬೇಕು. ಎಸ್ ಎಸ್ ಐಟಿ ಅಂದರೆ ಸಿದ್ದರಾಮಯ್ಯ, ಶಿವಕುಮಾರ್ ವಿಶೇಷ ತನಿಖಾ  ಸಂಸ್ಥೆ ಎಂದರ್ಥ ಎಂದು ಸಾ.ರಾ ಮಹೇಶ್ ವ್ಯಂಗ್ಯವಾಡಿದರು

ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ  vs ಡಿಸಿಎಂ ಡಿಕೆ ಶಿವಕುಮಾರ್ ಪರಸ್ಪರ ಮಾತಿನ‌ ಸಮರ ಕುರಿತು ಪ್ರತಿಕ್ರಿಯಿಸಿದ ಸಾ.ರಾ ಮಹೇಶ್, ಡಿಕೆ ಶಿವಕುಮಾರ್ ನೀವು ಸಿಎಂ ಆಗಿ ಯಾರು ಬೇಡ ಅಂದರು. ಹೈಕಮಾಂಡ್ ನಲ್ಲಿ ಏನು ತೀರ್ಮಾನ ಆಗಿದೆ ಗೊತ್ತಿಲ್ಲ. ಏನೋ ನಮ್ಮವರು ಒಬ್ಬರು ಮುಖ್ಯಮಂತ್ರಿ ಆಗಲಿ ಎಂದು ಜನ ನಿಮಗೆ 136 ಸೀಟು ಕೊಟ್ಟರು ಮುಂದೆ ನೀವು ಸಿಎಂ ಆದರೆ ಸಂತೋಷ. ಸಿಎಂ ಆಗಬೇಡಿ ಅನ್ನೋಕೆ ನಾವ್ಯಾರೂ? ಅದನ್ನು ಬಿಟ್ಟು ದೇವೇಗೌಡರ ಕುಟುಂಬದ ಮೇಲೆ ಯಾಕೆ ದ್ವೇಷ ಕಾರುತ್ತೀರಾ.? ಪರಸ್ಪರ ಕಿತ್ತಾಡೋದನ್ನ ಈ ಕೂಡಲೇ ಬಿಡಿ. ನಾನು ನಮ್ಮ ನಾಯಕರಾದ ಎಚ್.ಡಿ ಕುಮಾರಸ್ವಾಮಿ ಅವರಿಗೂ ಮನವಿ ಮಾಡಿದ್ದೇನೆ. ವೈಯಕ್ತಿಕ ವಿಚಾರ ಚರ್ಚೆ ಬೇಡ ನಾವು ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಬೇಕಿದೆ ಅಷ್ಟೇ. ಅದನ್ನ ಜನ ಸಾಮಾನ್ಯರಿಗೆ ತಿಳಿಸುವ ಕೆಲಸ ಮಾಡೋಣ ಎಂದು ಮನವಿ ಮಾಡಿದ್ದೇನೆ ಎಂದರು.

ಬಿಜೆಪಿ ಜೆಡಿಎಸ್ ಪಾದಯಾತ್ರೆಗೆ ಕಾಂಗ್ರೆಸ್ ವಿರೋಧ ಕುರಿತು ಪ್ರತಿಕ್ರಿಯಿಸಿದ ಸಾ.ರಾ ಮಹೇಶ್,  ನೀವು ಬಳ್ಳಾರಿ ಪಾದಯಾತ್ರೆ ಮಾಡಿದಾಗ ನಾವು ಚಕಾರ ಎತ್ತಿದ್ವಾ ? ನೀವು ಆಡಳಿತ ಪಕ್ಷದಲ್ಲಿದ್ದೀರಾ ನಿಮಗೆ ಅಧಿಕಾರ ಇದೆ ಆಡಳಿತ ಮಾಡಿ. ಕಾಂಗ್ರೆಸ್ ಸಹ ವಿರೋಧ ಪಕ್ಷದ ರೀತಿ ವರ್ತಿಸುತ್ತಿದ್ದಾರೆ ಬಿಜೆಪಿ 20 ತಪ್ಪು‌ ಮಾಡಿದೆ ಅಂತೀರಾ. ಇದು ಕಾಂಗ್ರೆಸ್ ಸರ್ಕಾರದ ಬ್ಲ್ಯಾಕ್‌ ಮೇಲ್. ನೀವೇ ಅಧಿಕಾರದಲ್ಲಿದ್ದೀರಾ ತನಿಖೆ ಮಾಡಿ ಇಷ್ಟು ದಿನ ಏನು ಮಾಡುತ್ತಿದ್ದೀರಾ ? ಎಂದು ಪ್ರಶ್ನಿಸಿದರು.

Key words: PSI, Parushuram, suicide, MLA, Chennareddy, Sara Mahesh