ಕಲ್ಬುರ್ಗಿ,ಮೇ,11,2022(www.justkannada.in): ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ 9 ಅಭ್ಯರ್ಥಿಗಳ ಜಾಮೀನು ಅರ್ಜಿಯನ್ನ ಕಲ್ಬುರ್ಗಿ ನ್ಯಾಯಾಲಯ ವಜಾಗೊಳಿಸಿದೆ.
ಈ ಮೂಲಕ 9 ಅಭ್ಯರ್ಥಿಗಳಿಗೂ ಜೈಲೇ ಗತಿಯಾಗಿದೆ. ಆರೋಪಿಗಳಾದ ವಿಶಾಲ್, ಹಯ್ಯಾಳಿ ದೇಸಾಯಿ. ಶರಣ ಬಸಪ್ಪ, ರುದ್ರೇಗೌಡ, ಮಹಂತೇಶ್ ಪಾಟೀಲ್, ಮಲ್ಲಿಕಾರ್ಜುನ್ ಪಾಟೀಲ್, ಸುರೇಶ್ ಕಟೇಗಾಂ, ಚಾಲಕ ಸದ್ಧಾಂ, ಕಾಳಿ ದಾಸ್ ಜಾಮೀನು ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಆದರೆ ಜಾಮೀನು ನೀಡಿದ್ರೆ ಸಾಕ್ಷಿ ನಾಶಪಡಿಸುವ ಸಾಧ್ಯತೆ ಇದೆ. ಹೀಗಾಗಿ ಜಾಮೀನು ನೀಡದಂತೆ ಸಿಐಡಿ ಮನವಿ ಮಾಡಿತ್ತು. ಇದೀಗ ಕೋರ್ಟ್ ಜಾಮೀನು ಅರ್ಜಿಯನ್ನ ವಜಾಗೊಳಿಸಿದೆ. ಇನ್ನು ಪ್ರಕರಣದ ಆರೋಪಿ ದಿವ್ಯಾ ಹಾಗರಗಿ ಪತಿ ರಾಜೇಶ್ ಹಾಗರಗಿ, ಚೇತನ್ ನಂದಗಾಂವ,ಅರುಣ್ ಕುಮಾರ್, ಸುಮಾ, ಸಿದ‍್ಧಮ್ಮ ಸಲ್ಲಿಸಿದ್ಧ ಜಾಮೀನು ಅರ್ಜಿಯೂ ವಜಾಗೊಂಡಿದೆ.
Key words: PSI-recruitment- illegal –case-Bail -application – dismissed