ಬೆಂಗಳೂರು,ಮೇ,5,2022(www.justkannada.in): ಪರೀಕ್ಷೆಗಳ ವಿಚಾರದಲ್ಲಿ ಸಚಿವ ಡಾ.ಅಶ್ವತ್ಥ್ ನಾರಾಯಣ್ ಬಹಳ ಅನುಭವಸ್ಥರು. ಪರೀಕ್ಷೆ ಬರೆಯದ ನರ್ಸ್ಗಳಿಗೆ ಸರ್ಟಿಫಿಕೇಟ್ ಕೊಡಿಸಿದ್ದಾರೆ ಎಂದು ಅಂತ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಇಂದು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಈ ಹಿಂದೆ ನರ್ಸ್ಗಳಿಗೆ ಸರ್ಟಿಫಿಕೆಟ್ ವಿಚಾರದಲ್ಲಿ ಡಾ.ಅಶ್ವತ್ಥ್ ನಾರಾಯಣ ಹೆಸರು ಕೇಳಿಬಂದಿತ್ತು. ರಾಜಕೀಯಕ್ಕೆ ಬರುವ ಮುನ್ನ ಡಾ.ಅಶ್ವಥ್ ನಾರಾಯಣ್ ಸಾಕಷ್ಟು ಜನರಿಗೆ ಸರ್ಟಿಫಿಕೆಟ್ ಕೊಡಿಸಿದ್ದಾರೆ. ಕಾಂಗ್ರೆಸ್ ನವರು ಈ ವಿಚಾರದ ಬಗ್ಗೆ ಪ್ರಸ್ತಾಪ ಮಾಡಬೇಕಿತ್ತು ಎಂದರು.
ಪಿಎಸ್ಐ ನೇಮಕಾತಿಗೆ ಸಂಬಂಧ ಹಲವರು ಹಣ ನೀಡಿದ್ದಾರೆ. ಹಣ ನೀಡಿದ ಅಭ್ಯರ್ಥಿಗಳು ಈಗ ಜೈಲಿಗೆ ಹೋಗಬೇಕಾಗಿದೆ. ಈ ಹಿಂದೆ ಡ್ರಗ್ಸ್ ನಲ್ಲಿ ಮಾಜಿ ಸಿಎಂ ಪ್ರಭಾವ ಇದೆ ಅಂದರು. ಅದು ಒಂದು ಹಂತಕ್ಕೆ ಬಂದು ನಿಂತಿ ಹೋಯ್ತು ಎಂದು ಹೆಚ್.ಡಿ ಕುಮಾರಸ್ವಾಮಿ ಟೀಕಿಸಿದರು.
2008ರಲ್ಲಿ ಅಂದಿನ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದೆವು. ಆಗ ಟನ್ಗಟ್ಟಲೇ ಮಾಹಿತಿ ಇಟ್ಟಿದ್ದೇನೆ. ಆಡಳಿತದ ಸರ್ಕಾರ ಎಲ್ಲ ವಿಚಾರದಲ್ಲೂ ಮೌನವಹಿಸಿದೆ. ಮೌನ ವಹಿಸಿವುದರ ಅರ್ಥವೇ ಪಾಲುದಾರರು ಎಂದರ್ಥ ಎಂದು ಹೆಚ್.ಡಿಕೆ ಕಿಡಿಕಾರಿದರು.
Key words: psi-scam-minister-Ashwath naranayan-HD Kumaraswamy