ಪಿಎಸ್ ಐ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ

ಮೈಸೂರು,ಜನವರಿ,6,2025 (www.justkannada.in): ಇತ್ತೀಚೆಗೆ ನಡೆದ 545 ಪಿಎಸ್ ಐ ನೇಮಕಾತಿಗೆ ಸಂಬಂಧಿಸಿದಂತೆ ದಕ್ಷಿಣ ವಲಯ ಘಟಕಗಳಲ್ಲಿ ಪಿಎಸ್ ಐ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ.

ಪೊಲೀಸ್ ಉಪ  ಮಹಾ ನಿರೀಕ್ಷಕರು ದಕ್ಷಿಣ ವಲಯ ರವರ ಕಚೇರಿ , ಮೈಸೂರು ಈ ಕುರಿತು  ಆದೇಶ ಹೊರಡಿಸಿದ್ದಾರೆ. ಅಧಿಸೂಚನೆ ಮೇರೆಗೆ ಪೊಲೀಸ್ ಸಬ್-ಇನ್ಸ್‌ಪೆಕ್ಟರ್(ಸಿವಿಲ್)(ಪುರುಷ ಮತ್ತು ಮಹಿಳಾ) (ಸೇವಾನಿರತ ಸೇರಿದಂತೆ) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿ ಉಲ್ಲೇಖ(3)ರ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದ ನಿಮ್ಮನ್ನು ಪೊಲೀಸ್ ಸಬ್-ಇನ್ಸ್ ಪೆಕ್ಟರ್(ಸಿವಿಲ್) ಹುದ್ದೆಗೆ ವೇತನ ಶ್ರೇಣಿ ರೂ. 61300-1500- 64300-1650-74200-1900-85600-2300-99400-2700-11290000 ಮತ್ತು ಆಗಿಂದಾಗ್ಗೆ ದೊರಕಬಹುದಾದ ಇತರೆ ಭತ್ಯೆಗಳನ್ನೊಳಗೊಂಡಂತೆ ಉಲ್ಲೇಖಿತ-4ರಲ್ಲಿನ ಸರ್ಕಾರದ ಈ ಕೆಳಕಂಡ ಷರತ್ತುಗಳೆಪಟ್ಟು ದಕ್ಷಿಣ ವಲಯದ ಘಟಕಗಳಲ್ಲಿ ಖಾಲಿಯಿರುವ ಪಿಎಸ್‌ಐ(ಸಿವಿಲ್)ಹುದ್ದೆಗೆ ನೇಮಕಾತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಕೆಳಕಂಡಂದೆ ಆದೇಶ ಹೊರಡಿಸಲಾಗಿದೆ.

Key words: Appointment,order, candidates, selected ,PSI