ಬೆಂಗಳೂರು,ಜೂನ್,11,2021(www.justkannada.in): ರಾಜ್ಯದಲ್ಲಿ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಆನ್ ಲೈನ್ ಪರೀಕ್ಷೆ ನಡೆಸಲು ಪಿಯು ಬೋರ್ಡ್ ಆದೇಶ ಹೊರಡಿಸಿದೆ.
ಕೊರೋನಾ ಲಾಕ್ ಡೌನ್ ಹಿನ್ನೆಲೆ ರಾಜ್ಯದಲ್ಲಿ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷೆ ಇಲ್ಲದೆ ಪಾಸ್ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದರು. ಆದರೆ ಇದೀಗ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಆನ್ ಲೈನ್ ಪರೀಕ್ಷೆ ನಡೆಸಲು ಎಲ್ಲಾ ಕಾಲೇಜುಗಳಿಗೆ ಪಿಯು ಬೋರ್ಡ್ ಆದೇಶಿಸಿದೆ. ಆನ್ ಲೈನ್ ನಲ್ಲಿಯೇ ಪರೀಕ್ಷೆ ನಡೆಸುವಂತೆ ಎಲ್ಲಾ ಕಾಲೇಜುಗಳಿಗೆ ಸುತ್ತೋಲೆ ಮೂಲಕ ಆದೇಶಿಸಿ, ಈಗ ವಿದ್ಯಾರ್ಥಿಗಳಿಗೆ ಶಾಕ್ ಕೊಟ್ಟಿದೆ.
2 ವಿಷಯಗಳ ಮೂಲಕ ಪರೀಕ್ಷೆ ನಡೆಸಲು ಸೂಚಿಸಿರುವ ಪಿಯು ಮಂಡಳಿಯು, ಆನ್ ಲೈನ್ ಮೂಲಕ ಪರೀಕ್ಷೆ ನಡೆಸಿ, ಅದರ ಆಧಾರದ ಮೇಲೆ ಪ್ರಥಮ ಪಿಯುಸಿ ಫಲಿತಾಂಶ ಪ್ರಕಟಕ್ಕೂ ಸೂಚಿಸಿದೆ. ಈ ಮೂಲಕ ಪರೀಕ್ಷೆ ಇಲ್ಲದೆ ಪಾಸ್ ಎಂದು ನಂಬಿದ್ದ ಪಿಯು ವಿದ್ಯಾರ್ಥಿಗಳು ಇದೀಗ ಆನ್ ಲೈನ್ ಮೂಲಕ ಎರಡು ವಿಷಯಗಳ ಪರೀಕ್ಷೆ ಬರೆಯಬೇಕಿದೆ.
Key words: PU Board -order -online exams -first PU -students.