ಮೈಸೂರು, ಸೆಪ್ಟಂಬರ್,11,2020(www.justkannada.in): ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿರುವ ‘ಆಕ್ಸ್ ಫರ್ಡ್ ಸ್ಟೇಷನರ್ಸ್’ ಪುಸ್ತಕ ಮಳಿಗೆಯಲ್ಲಿ ಇದೀಗ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಪಠ್ಯಪುಸ್ತಕಗಳು ಮಾರಾಟಕ್ಕೆ ಲಭ್ಯವಿರಲಿವೆ.
ಕೊರೋನಾ ನಡುವೆ ಶಾಲಾ ಕಾಲೇಜುಗಳನ್ನ ಹಂತ ಹಂತವಾಗಿ ತೆರೆಯಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು ಶೀಘ್ರವೇ ಶಾಲಾ- ಕಾಲೇಜುಗಳು ಓಪನ್ ಆಗುವ ಸಾಧ್ಯತೆ ಇದೆ. ಹೀಗಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪುಸ್ತಕ ಕೊಂಡುಕೊಳ್ಳಲು ಮುಂದಾಗಲಿದ್ದಾರೆ. ಈ ಹಿನ್ನೆಲೆ ನಗರದ ರಾಮಸ್ವಾಮಿ ವೃತ್ತದ ಷೂವರ್ಲ್ಡ್ ಮಳಿಗೆ ಮೇಲಿರುವ ಆಕ್ಸ್ ಫರ್ಡ್ ಸ್ಟೇಷನರ್ಸ್’ ಪುಸ್ತಕ ಮಳಿಗೆಯಲ್ಲಿ ಕರ್ನಾಟಕ ಸರ್ಕಾರದಿಂದ ಮತ್ತು ಎನ್ ಸಿಆರ್ ಟಿ 2020-21 ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪಠ್ಯ ಪುಸ್ತಕಗಳು ಮತ್ತು ಅವುಗಳ ಸೈನ್ಸ್/ ಕಾಮರ್ಸ್/ ಆರ್ಟ್ಸ್/ ಮತ್ತು ಭಾಷೆಗಳ ಪಠ್ಯ ಪುಸ್ತಕಗಳು, ರೆಫರೆನ್ಸ್ ಪುಸ್ತಕಗಳು ಮಾರಾಟಕ್ಕೆ ಲಭ್ಯವಿದೆ.
ವಿದ್ಯಾರ್ಥಿಗಳಿಗೆ ವಿಶೇಷವಾಗಿ ರೆಫರೆನ್ಸ್ ಪುಸ್ತಕಗಳ ಮೇಲೆ ಶೇ.10 ರಷ್ಟು ರಿಯಾಯಿತಿ ಇರುತ್ತದೆ. (ವಿದ್ಯಾಸಂಸ್ಥೆಗಳಿಗೆ ವಿಶೇಷವಾಗಿ ರೆಫರೆನ್ಸ್ ಪುಸ್ತಕಗಳ ಮೇಲೆ 1-9-2020 ರಿಂದ 30-9-2020ರವರೆಗೆ ಸಗಟು ರಿಯಾಯಿತಿ ನೀಡಲಾಗುವುದು ಎಂದು ಆಕ್ಸ್ ಫರ್ಡ್ ಸ್ಟೇಷನರ್ಸ್’ ವ್ಯವಸ್ಥಾಪಕ ಕೆ.ಜಿ ವಿನಯ್ ಕುಮಾರ್ ತಿಳಿಸಿದ್ದಾರೆ.
Key words: PU -Text Books- available – Oxford Stationers’ – Mysore.