ಬೆಂಗಳೂರು,ಫೆಬ್ರವರಿ,10,2022(www.justkannada.in): ಮತ್ತೊಮ್ಮೆ ಪಬ್ಲಿಕ್ ಟಿವಿಯ ಖಾಸಗಿ ವಿಚಾರ ಹಂಚಿಕೊಳ್ತಿದ್ದೇನೆ. ಕಾರಣ ಸ್ಪಷ್ಟ ಕನ್ನಡ ಪತ್ರಿಕೋದ್ಯಮದಲ್ಲಿ ಅದರಲ್ಲೂ ವಿದ್ಯುನ್ಮಾನ ಪತ್ರಿಕೋದ್ಯಮದ ಮಟ್ಟಿಗೆ ಒಂದು ಉತ್ತಮ ಮಾದರಿ ನಿಮಗೆ ತಿಳಿದಿರಲಿ ಎನ್ನುವ ಕಾರಣಕ್ಕಾಗಿ ಮಾತ್ರ ಬರೆಯುತ್ತಿದ್ದೇನೆ. ಪಬ್ಲಿಕ್ ಟಿವಿ ದಶಮಾನೋತ್ಸವದ ಸಂಭ್ರಮದಲ್ಲಿದೆ. ಹೀಗಾಗಿ, ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಎಚ್.ಆರ್. ರಂಗನಾಥ್ ಸಂಸ್ಥೆಯಲ್ಲಿ 10 ವರ್ಷ ಪೊರೈಸಿದ ಎಲ್ಲಾ ಸಿಬ್ಬಂದಿಗೂ ತಲಾ 25 ಸಾವಿರ ರೂಪಾಯಿ ಬೋನಸ್ ಕೊಟ್ಟಿದ್ದಾರೆ. 10 ವರ್ಷಕ್ಕಿಂತಾ ಕಡಮೆ ಅವಧಿಯ ಎಲ್ಲಾ ಸಿಬ್ಬಂದಿಗೂ ತಲಾ 10 ಸಾವಿರ ರೂಪಾಯಿ ಬೋನಸ್ ಕೊಟ್ಟಿದ್ದಾರೆ.
ಇದರ ಜೊತೆಗೆ ಎಲ್ಲಾ ಸಿಬ್ಬಂದಿಗೂ ಬೆಳ್ಳಿಯ ಫಲಕ, ಗಿಫ್ಟ್ ಬಾಕ್ಸ್ ನೀಡಿದ್ದಾರೆ. ಸಂಸ್ಥೆ ಆರಂಭವಾದ ತಿಂಗಳಿಂದ ಇದುವರೆಗೂ ಒಂದೇ ಒಂದು ತಿಂಗಳು ಒಂದು ದಿನವೂ ಸಂಬಳ ತಡ ಮಾಡದೆ, ಪ್ರತಿ ವರ್ಷ ಸಂಬಳ ಹೆಚ್ಚಿಸುತ್ತಾ, ಹಾಗಾಗ ಬೋನಸ್ ನೀಡುತ್ತಾ, ತಮ್ಮ ಮಗಳ ಮದುವೆಯ ಸಂಭ್ರಮಕ್ಕೂ ಬೋನಸ್ ನೀಡಿದ್ದಾರೆ.
ಇದು ಸಂಸ್ಥೆಯ ಸಿಬ್ಬಂದಿಗಳ ಬಗ್ಗೆ ರಂಗನಾಥ್ ಅವರಿಗೆ ಇರುವ ಕಾಳಜಿ. ಒಂದು ಸಂಸ್ಥೆಯ ಮುಖ್ಯಸ್ಥರಿಗೆ ಆರ್ಥಿಕ ಶಿಸ್ತು ಇದ್ದಾಗ, ಸಂಸ್ಥೆಯ ನೌಕರರು ತಮ್ಮ ಕುಟುಂಬದ ಸದಸ್ಯರು ಎಂಬ ಮನೋಭಾವ ಇದ್ದಾಗ ಮಾತ್ರ ಇಂತಹ ಸ್ಪಂದನೆಗಳು ಉಂಟಾಗುತ್ತವೆ! – ಇಂತಹ ಮಾದರಿಗಳು ಕನ್ನಡ ಮಾಧ್ಯಮದಲ್ಲಿ ಹೆಚ್ಚಾಗಬೇಕಿದೆ. ಹೆಚ್ಚಾಗಲಿ ಎಂಬುದು ನನ್ನ ಆಶಯ.
ಫೆಸ್ ಬುಕ್ ಕೃಪೆ
ಕೆ.ಪಿ.ನಾಗರಾಜ್, ಮೈಸೂರು.
Key words: Public TV – Gift -Staff.