ರಾಮನಗರ ಬಳಿ ನಡೆದ ಅಪಘಾತದಲ್ಲಿ ಪಬ್ಲಿಕ್ ಟಿವಿ ವರದಿಗಾರ ಮೃತ

 

ರಾಮನಗರ, ಏ.21, 2020 : (www.justkannada.in news) ಇಲ್ಲಿನ ‘ ಪಬ್ಲಿಕ್ ಟಿವಿ‌ ‘ ವರದಿಗಾರ ಹನುಮಂತು ವಾಹನ ಅಪಘಾತದಲ್ಲಿ ಮೃತಪಟ್ಟರು.

ಬೆಂಗಳೂರು ಪಾದರಾಯನಪುರ ಗಲಭೆಯ ಆರೋಪಿಗಳನ್ನ ಇಂದು ರಾಮನಗರದ ಕಾರಾಗೃಹಕ್ಕೆ ಕರೆತರಲಾಗಿತ್ತು. ಈ ಸುದ್ದಿಯನ್ನು ಕವರ್ ಮಾಡಿ ಬರುತ್ತಿದ್ದ ವೇಳೆ ಹಿಂದಿನಿಂದ ಬಂದ ATM ವಾಹನ ವರದಿಗಾರ ಹನುಮಂತು ಅವರ ಸ್ಕೂಟರ್ ಗೆ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ.

 public-tv-reporter-ramanagara-hanumanthu-died-road-accident

ರಾಮನಗರದ ಕಾರಾಗೃಹದ ಬಳಿ ಘಟನೆ. ವಿವಾಹವಾಗಿ ಮೂರು ವರ್ಷವಾಗಿತ್ತು. ಒಂದು ವರ್ಷದ ಒಂದು ಮಗು ಹನುಮಂತು ಅವರಿಗಿದೆ. ಪಬ್ಲಿಕ್ ವರದಿಗಾರ ಹನುಮಂತು ಕಳೆದ 6 ವರ್ಷಗಳಿಂದಲೂ ರಾಮನಗರ ವದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಹನುಮಂತು ನಿಧನಕ್ಕೆ ರಾಮನಗರ ಜಿಲ್ಲಾ ಪತ್ರಕರ್ತ ಸಹೋದ್ಯೋಗಿಗಳು ಕಂಬನಿ‌ ಮಿಡಿದಿದ್ದಾರೆ.

ಕುಮಾರಸ್ವಾಮಿ ಕಂಬನಿ :

ಪಬ್ಲಿಕ್ ಟಿವಿ ವರದಿಗಾರ ಹನುಮಂತು ನಿಧನಕ್ಕೆ ಮಾಜಿ ಸಿಎಂ ಹೆಚ್ಡಿಕೆ ಮತ್ತು ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಕಂಬನಿ.
ವಿಧಿವಶರಾದ ಪಬ್ಲಿಕ್ ಟಿವಿ ಹನುಮಂತು ಕುಟುಂಬಕ್ಕೆ ವೈಯುಕ್ತಿಕ 5 ಲಕ್ಷ ಪರಿಹಾರ ಘೋಷಿಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ. ಆರೋಗ್ಯ ಸಮಸ್ಯೆ ಇರುವ ಹನುಮಂತು ಮಗುವಿನ ಸಂಪೂರ್ಣ ಚಿಕಿತ್ಸೆಯ ಹೊಣೆ ಹೊರುವುದಾಗಿ ತಿಳಿಸಿದ ಮಾಜಿ ಸಿಎಂ ಹೆಚ್ಡಿಕೆ.

key words : public-tv-reporter-ramanagara-hanumanthu-died-road-accident