ಬೆಂಗಳೂರು, ಫೆಬ್ರವರಿ 28, 2022 (www.justkannada.in): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರರಂಗಕ್ಕೆ ಬಂದು ಇಂದಿಗೆ 46 ವರ್ಷ!
ಹೌದು. 1976 ರಲ್ಲಿ ಪ್ರೇಮದ ಕಾಣಿಕೆ ಸಿನಿಮಾ ಮೂಲಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಾಲ ನಟನಾಗಿ ಚಿತ್ರರಂಗ ಪ್ರವೇಶಿಸಿದ್ದರು.
ಆ ಸಿನಿಮಾದಲ್ಲಿ ನಟಿಸುವಾಗ ಅವರಿಗೆ ಇನ್ನೂ ಆರು ತಿಂಗಳು. ಇದಾದ ಬಳಿಕ ಬಾಲನಟನಾಗಿ ಎಲ್ಲರ ಮನಸ್ಸು ಗೆದ್ದಿದ್ದರು.
ಈ ಸಂಭ್ರಮದ ಕ್ಷಣದಲ್ಲಿ ಅವರೇ ನಮ್ಮೊಂದಿಗಿಲ್ಲ. ಅವರ ನಿಧನದ ದಿನವೇ ಇಂತಹ ವಿಶೇಷ ದಿನ ಎಂಬುದು ಅಭಿಮಾನಿಗಳಿಗೆ ಮತ್ತಷ್ಟು ನೋವು ತಂದಿದೆ.