ಬೆಂಗಳೂರು, ಅಕ್ಟೋಬರ್ 31, 2021 (www.justkannada.in): A Day without Workout is a Day Wasted… ಇದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೇಳಿದ್ದ ಮಾತು ಹಾಗೂ ಅಳವಡಿಸಿಕೊಂಡಿದ್ದ ಜೀವನ ಶೈಲಿ….
ಇಷ್ಟಾದರೂ ಹೃದಯಾಘಾತಕ್ಕೆ ಪವರ್ ಸ್ಟಾರ್ ಬಲಿಯಾಗಿದ್ದು, ರಾಜ್ಯದ ಜನರನ್ನು ಶಾಕ್ ಗೆ ದೂಡಿದೆ. ಅಪ್ಪು ಹೊಸ ಪಾಠವೊಂದನ್ನು ಕಲಿಸಿ ಹೋಗಿದ್ದಾರೆ. ಅಪ್ಪು ಸಾವಿನ ಬಳಿಕ ಹೃದಯ ತಪಾಸಣೆ ಬರುವವರ ಸಂಖ್ಯೆ ಹೆಚ್ಚಾಗಿದೆ ಎಂಬ ವಿಷಯ ಮೈಸೂರಿನ ಜಯ ದೇವ ಆಸ್ಪತ್ರೆಗಾಗಿ ತಪಾಸಣೆಗಾಗಿ ಬಂದು ಹೋದವರ ಸಂಖ್ಯೆ ಮೇಲೆ ಕಣ್ಣಾಡಿಸಿದರೆ ಖಚಿತವಾಗುತ್ತಿದೆ.
ಪುನೀತ್ ರಾಜ್ ಕುಮಾರ್ ಅವರು ಫಿಟ್ ನೆಸ್ ಸಂಬಂಧ ಸಾಕಷ್ಟು ಕಾಳಜಿ ವಹಿಸಿದ್ದರು. ಅದರೂ ಅವರಿಗೆ ಹೃದಯಾಘಾತವಾಗಿದ್ದು ರಾಜ್ಯದ ಜನತೆಯನ್ನೂ ಬೆಚ್ಚಿ ಬೀಳಿಸುತ್ತಿದೆ. ಇದರ ಪರಿಣಾಮ ಎಂಬಂತೆ ಈ ಮೂರು ದಿನಗಳಿಂದ ಜಯದೇವ ಆಸ್ಪತ್ರೆಗೆ ತಪಾಸಣೆ (ಜನರಲ್ ಚೆಕ್ ಅಪ್)ಗೆ ಬರುವವ ಸಂಖ್ಯೆ ದುಪ್ಪಟ್ಟಾಗಿದೆ.
ಈ ಸಂಬಂಧ ಜಸ್ಟ್ ಕನ್ನಡದೊಂದಿಗೆ ಮಾತನಾಡಿದ ಜಯದೇವ ಆಸ್ಪತ್ರೆ ಮೆಡಿಕಲ್ ಸೂಪರಿಡೆಂಡ್ ಡಾ.ಸದಾನಂದ. ಅಪ್ಪು ಅವರೊಂದಿಗಿನ ಭಾವನಾತ್ಮಕ ಸಂಬಂಧ ಹಾಗೂ ಅವರು ತೋರುತ್ತಿದ್ದ ಆರೋಗ್ಯ ಕಾಳಜಿಯನ್ನು ನೋಡಿದ್ದ ಜನರಿಗೆ ಅವರ ಸಾವು ಆಘಾತದ ಜತೆಗೆ ಹೃದಯ ಕಾಳಜಿ ಬಗ್ಗೆ ಯೋಚಿಸುವಂತೆ ಮಾಡಿದೆ. ಇದರ ಪರಿಣಾಮ ನಮ್ಮ ಆಸ್ಪತ್ರೆಗೆ ಬರುವವರ ಸಂಖ್ಯೆ ದುಪ್ಪಟ್ಟಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದು ಜನಸಾಮಾನ್ಯರು ಮಾತ್ರವಲ್ಲದೇ, ವೈದ್ಯರೂ ಕೂಡ ಜನರಲ್ ಚೆಕ್ ಅಪ್ ಗೆ ದೌಡಾಯಿಸುತ್ತಿದ್ದಾರೆ. ಎಮರ್ಜೆನ್ಸಿ ಒಪಿಡಿಗೆ ಸಾಮಾನ್ಯವಾಗಿ 60ರಿಂದ 70 ಮಂದಿ ಚೆಕ್ ಅಪ್’ಗೆ ಬರುತ್ತಿದ್ದರು. ಆದರೆ ಆ ಸಂಖ್ಯೆ ಈಗ 100ರಿಂದ 120ಕ್ಕೆ ತಲುಪಿದೆ ಎಂದು ಡಾ.ಸದಾನಂದ ತಿಳಿಸಿದ್ದಾರೆ.
ಮೂರು ಪಟ್ಟು ಹೆಚ್ಚಳ
ಇನ್ನು ಸಾಮಾನ್ಯವಾಗಿ ರಾತ್ರಿ ವೇಳೆ ತಪಾಸಣೆ, ಚಿಕಿತ್ಸೆಗೆ ಬರುತ್ತಿದ್ದವರ ಸಂಖ್ಯೆಯೂ ಮೂರರಷ್ಟು ಹೆಚ್ಚಾಗಿದೆ. ಇನ್ನು ಶನಿವಾರ ರಾತ್ರಿ ಬರೋಬ್ಬರಿ 98 ಮಂದಿ ಆಗಮಿಸಿ ತಪಾಸಣೆಗೊಳಗಾಗಿದ್ದಾರೆ. ಈ ಸಂಖ್ಯೆ ಸಾಮಾನ್ಯ ದಿನಗಳಲ್ಲಿ ರಾತ್ರಿ 8ರಿಂದ ಬೆಳಗ್ಗೆ 8ರವರೆಗೆ 20ರಿಂದ 25 ಮಾತ್ರ ಇರುತ್ತಿತ್ತು ಎಂದು ಜಯದೇವ ಆಸ್ಪತ್ರೆ ನರ್ಸಿಂಗ್ ಸೂಪರಿಂಡೆಂಟ್ ಹರೀಶ್ ಮಾಹಿತಿ ನೀಡಿದ್ದಾರೆ.
key words: puneeth rajkumar teach’s heart helth lesson: jayadeva hospital visitors numbers goes double