ನವದೆಹಲಿ, ಅಕ್ಟೋಬರ್ 22, 2019 (www.justkannada.in): ಪ್ರಧಾನಿ ನರೇಂದ್ರ ಮೋದಿ ಅವರ ‘ಭಾರತ್ ಕಿ ಲಕ್ಷ್ಮೀ’ ಅಭಿಯಾನಕ್ಕೆ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧೂ ಬೆಂಬಲ ಸೂಚಿಸಿದ್ದಾರೆ.
ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದೇಶದ ಹೆಣ್ಣು ಮಕ್ಕಳನ್ನು ಗುರುತಿಸುವ ಸಲುವಾಗಿ ಮನ್ ಕೀ ಬಾತ್ ನಲ್ಲಿ ನರೇಂದ್ರ ಮೋದಿ ಭಾರತ್ ಕೀ ಲಕ್ಷ್ಮೀ ಅಭಿಯಾನವನ್ನು ಆರಂಭಿಸಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಭಾರತ್ ಕೀ ಲಕ್ಷ್ಮೀ ಎಂಬ ವಿಶೇಷ ಹ್ಯಾಶ್ ಟ್ಯಾಗ್ ಬಳಕೆ ಮಾಡುವಂತೆ ಪ್ರಧಾನಿ ಮೋದಿ ಮನವಿ ಮಾಡಿಕೊಂಡಿದ್ದರು. ಇದೀಗ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧೂ ಬೆಂಬಲ ಸೂಚಿಸಿದ್ದಾರೆ.