ಬೆಂಗಳೂರು,ಡಿಸೆಂಬರ್,21,2020(www.justkannada.in): ಇಂಗ್ಲೇಂಡ್ ನಲ್ಲಿ ಹೊಸ ವಂಶವಾಹಿನಿಯ ವೈರಸ್ ಪತ್ತೆಯಾಗಿದೆ. ಮೂರು ದೇಶಗಳಲ್ಲಿ ಕೊರೋನಾ ಹೊಸ ಪ್ರಭೇದ ಪತ್ತೆಯಾಗಿದ್ದು ಈ ಹಿನ್ನೆಲೆ ಕೇಂದ್ರ ಸರ್ಕಾರ ನಿಗಾವಹಿಸಲು ಸೂಚಿಸಿದೆ. ಹೀಗಾಗಿ ವಿದೇಶದಿಂದ ಬಂದವರು ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿರಬೇಕು ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಸುಧಾಕರ್, ಇಂಗ್ಲೇಂಡ್ ನಲ್ಲಿ ಹೊಸ ವಂಶವಾಹಿನಿಯ ವೈರಸ್ ಪತ್ತೆಯಾಗಿದೆ. ಹೊಸ ವೈರಸ್ ಕೊರೋನಾಗಿಂತ ಬೇಗನೆ ಹರಡುತ್ತದೆ. ಈ ಹಿಂದಿನ ಕೊರೋನಾಗಿಂತಲೂ ಬಹುಬೇಗ ಹರಡುತ್ತದೆ. ಯುಕೆಯಿಂದ ವಿಮಾನದಲ್ಲಿ 138 ಮಂದಿ ಬಂದಿದ್ದಾರೆ. ಕೋವಿಡ್ ನೆಗೆಟಿವ್ ರಿಪೋರ್ಟ್ ಇಲ್ಲದೇ ಬಂದಿದ್ದಾರೆ. ನಾಳೆಯಿಂದ ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಮಾಡಲಾಗುತ್ತದೆ. ವಿದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ವಿಶೇಷ ನಿಗಾ ಇಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಕೇಂದ್ರರ ಸರ್ಕಾರದ ಆದೇಶ ಪಾಲಿಸಲು ಸರ್ಕಾರ ಸಿದ್ಧ. ಹೀಗಾಗಿ ವಿದೇಶದಿಂದ ಬಂದವರಿಗೆ ಕ್ವಾರಂಟೈನ್ ಕಡ್ಡಾಯ. ವಿದೇಶದಿಂದ ಬಂದವರು RTPCR ಟೆಸ್ಟ್ ಮಾಡಿಸಿಕೊಳ್ಳಿ ಎಂದು ಹೇಳಿದರು.
ಯಾರೂ ಭಯಭೀತರಾಗುವ ಅವಶ್ಯಕತೆ ಇಲ್ಲ. ನಮ್ಮ ವೈದ್ಯರು ಕೊರೋನಾಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯರೂ ಕೂಡ ಭಯಭೀತರಾಗುವ ಅವಶ್ಯಕತೆ ಇಲ್ಲ. ಕರ್ನಾಟಕದಲ್ಲಿ ಹೊಸ ಪ್ರಬೇಧ ಪತ್ತೆಯಾಗಿಲ್ಲ. ಹೊಸ ಪ್ರಬೇಧದ ಬಗ್ಗೆ ನಿರ್ಲಕ್ಷ್ಯ ವಹಿಸಲ್ಲ ಎಂದು ಸುಧಾಕರ್ ತಿಳಿಸಿದರು.
Key words: Quarantine – compulsory – those – abroad-corona Test – airports –tomorrow-Minister- Dr. K. Sudhakar.