ಯುವನಿಧಿ ಕೊಡಬೇಕು ಅಂತಾ 9 ವಿವಿಗಳನ್ನ ಮುಚ್ಚಲು ಸರ್ಕಾರ ಮುಂದಾಗಿದೆ- ಆರ್.ಅಶೋಕ್

ಬೆಂಗಳೂರು,ಫೆಬ್ರವರಿ,15,2025 (www.justkannada.in):   ಯುವಕರು ಪದವಿ ಪಡೆದರೆ ಅವರಿಗೆ ಯುವನಿಧಿ ಕೊಡಬೇಕು  ಎಂದು ಕಾಂಗ್ರೆಸ್‌ ಸರ್ಕಾರ 9 ವಿಶ್ವವಿದ್ಯಾಲಯಗಳನ್ನು  ಮುಚ್ಚಲು ಮುಂದಾಗಿದೆ ಎಂದು  ವಿಪಕ್ಷ ನಾಯಕ ಆರ್‌ ಅಶೋಕ್‌ ಕಿಡಿಕಾರಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಆರ್.ಅಶೋಕ್, ಮಾರಿಕಣ್ಣು ಹೋರಿ ಮ್ಯಾಲೆ ಎಂಬಂತಾಗಿದೆ.  ರಾಜ್ಯ ಸರ್ಕಾರದ ಕಣ್ಣು ವಿವಿಗಳ  ಮೇಲೆ ಬಿದ್ದಿದೆ. 9 ವಿವಿಗಳನ್ನ ಮುಚ್ಚಲು  ಯತ್ನಿಸುತ್ತಿದೆ. ಯುವಕರು ಪದವಿಧರರಾದರೇ  ಯುವನಿಧಿ ಕೊಡಬೇಕು ಅಂತಾ  ವಿವಿ ಮುಚ್ಚಲು ಮುಂದಾಗಿದೆ ಎಂದು ಆರೋಪಿಸಿದರು.

ಉನ್ನತ ಶಿಕ್ಷಣ ವಲಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಉಪನ್ಯಾಸಕರ ನೇಮಕ ಆಗಿಲ್ಲ, ಅತಿಥಿ ಉಪನ್ಯಾಸಕರಿಗೆ ವೇತನ ಇಲ್ಲ. ಶಾಲೆ ಕಾಲೇಜು ಕಟ್ಟಡಗಳ ದುರಸ್ತಿ ಇಲ್ಲ ಪಠ್ಯಪುಸ್ತಕ, ಸಮಸವಸ್ತ್ರ ಕೊಡಲು ಕಾಸಿಲ್ಲ, ಮನಸಿಲ್ಲಈಗ ನಾಲ್ಕು ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಲು ಸಿದ್ದರಾಮಯ್ಯ ಹೊರಟಿದ್ದಾರೆ. ಈ ಬಜೆಟ್‌ನಲ್ಲಿ ವಿಶ್ವವಿದ್ಯಾಲಯಗಳಿಗೆ ಕೇವಲ 342 ಕೋಟಿ ರೂ. ನೀಡಲು ಸಾಧ್ಯವಿಲ್ಲವೇ ಎಂದು  ಆರ್.ಅಶೋಕ್ ವಾಗ್ದಾಳಿ ನಡೆಸಿದರು.

Key words: government, planning, close, 9 universities, R. Ashok