ಮೈಸೂರು,ಫೆಬ್ರವರಿ,24,2025 (www.justkannada.in): ರಂಜಾನ್ ವೇಳೆ ರಜೆ ಕೊಡುವುದಕ್ಕೆ ರಾಜ್ಯಸರ್ಕಾರ ಮುಂದಾಗಿದ್ದು, ಇಡೀ ಸರ್ಕಾರ ವೋಟಿಗಾಗಿ ರಾಜ್ಯದಲ್ಲಿ ಇಸ್ಲಾಮಿಕರಣ ಮಾಡಲು ಹೊರಟಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಇಡೀ ರಾಜ್ಯವೇ ಬೆಚ್ಚಿ ಬೀಳುವ ಘಟನೆ ಮೈಸೂರಿನಲ್ಲಿ ನಡೆದಿತ್ತು. ಪೋಲಿಸರನ್ನು ಕಂಡರೆ ದೊಡ್ಡ ರಾಜಕಾರಣಿಗಳು, ದೊಡ್ಡ ದೊಡ್ಡವರೇ ಭಯಬೀಳುತ್ತಾರೆ. ಆದರೆ ಈ ಕಿಡಿಗೇಡಿಗಳು ಪೋಲಿಸರ ಮೇಲೆ ದಾಳಿ ಮಾಡಿದ್ದಾರೆ. ನಿಯಂತ್ರಣ ಮಾಡದಿದ್ದರೆ ಪೋಲಿಸ್ ಠಾಣೆಗೆ ಬೆಂಕಿ ಹಚ್ಚುತ್ತಿದ್ದರು. ಈ ವೇಳೆ ಪೋಲಿಸರಿಗೆ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡಿದ್ದೇವೆ. ಅದಕ್ಕೆ ಪೋಲಿಸರು ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಈಗ ಕೆಲವೇ ಮಂದಿಯನ್ನ ಮಾತ್ರ ಬಂಧಿಸಿದ್ದಾರೆ. ಗೃಹ ಸಚಿವ ಪರಮೇಶ್ವರ್ ಅವರು ಠಾಣೆಗೆ ಬಂದು ಹೋದ ಮೇಲೆ ಬಂಧಿಸುವುದು ನಿಂತು ಹೋಗಿದೆ ಎಂದು ಆರೋಪಿಸಿದರು.
ಇಡೀ ಸರ್ಕಾರ ವೋಟಿಗಾಗಿ ಇಸ್ಲಾಮಿಕರಣ ಮಾಡಲಿಕ್ಕೆ ಹೊರಟಿದೆ. ರಂಜಾನ್ ವೇಳೆ ರಜೆ ಕೊಡಲಿಕ್ಕೆ ಹೊರಟಿದೆ. ಇಂದು ನಡೆಯುವ ಹೋರಾಟಕ್ಕೆ ನಾನು ಭಾಗವಹಿಸಲು ಬಂದಿದ್ದೇನೆ. ನಮ್ಮ ಹಿಂದು ಸಂಘಟನೆಗಳಿಗೆ ನಮ್ಮ ಬೆಂಬಲ ಇದೆ. ಇವರನ್ನ ಮಟ್ಟ ಹಾಕಲೇಬೇಕು ಇಲ್ಲ ಅಂದರೆ ದೇಶಕ್ಕೆ ಉಳಿಗಾಲ ಇಲ್ಲ ಎಂದು ಆರ್.ಅಶೋಕ್ ಹೇಳಿದರು.
Key words: government, Islamize, state, votes, R. Ashok