ಮಂಡ್ಯ,ಮಾರ್ಚ್,1,2025 (www.justkannada.in): ನಿಮಗೆ ಧಮ್ ತಾಕತ್ತು ಇದರೆ ಡಿಕೆ ಶಿವಕುಮಾರ್ ಅವರನ್ನ ಪಕ್ಷದಿಂದ ಸಸ್ಪೆಂಡ್ ಮಾಡಿ ಎಂದು ಕಾಂಗ್ರೆಸ್ ಹೈಕಮಾಂಡ್ ಗೆ ವಿಪಕ್ಷ ನಾಯಕ ಆರ್.ಅಶೋಕ್ ಸವಾಲು ಹಾಕಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ‘ಡಿ.ಕೆ. ಶಿವಕುಮಾರ್ ಬೇರೆ ಕಾಂಗ್ರೆಸ್ ನಾಯಕರಂತಲ್ಲ. ಬೇಕಾಗಿರುವುದನ್ನು ಒದ್ದು ಕಿತ್ತುಕೊಳ್ಳುವ ಜಾಯಮಾನ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಂಭಮೇಳಕ್ಕೆ ಹೋಗಬೇಡಿ ಎಂದಿದ್ದರು. ಆದರೂ ಡಿಕೆ ಶಿವಕುಮಾರ್ ಕುಂಭಮೇಳಕ್ಕೆ ಹೋದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಹಾಡಿ ಹೊಗಳಿದರು. ಶಿವರಾತ್ರಿಯಲ್ಲಿ ಸದ್ಗುರು ಜೊತೆ ವೇದಿಕೆ ಹಂಚಿಕೊಂಡರು. ನಿಮಗೆ ಧಮ್ಮು, ತಾಕತ್ತಿದ್ದರೆ ಡಿಕೆ ಶಿವಕುಮಾರ್ ರನ್ನು ಪಕ್ಷದಿಂದ ಸಸ್ಪಂಡ್ ಮಾಡಿ ಎಂದರು.
‘ಡಿಕೆಶಿ ಬಿಜೆಪಿ ಪಕ್ಷಕ್ಕೆ ಬರುವ ವಿಚಾರವಾಗಿ ನಮ್ಮಲ್ಲಿ ಚರ್ಚೆಯಾಗಿಲ್ಲ. ಮೊದಲು ಅವರನ್ನು ಸಸ್ಪೆಂಡ್ ಮಾಡಲಿ, ಮುಂದೆ ನೋಡೋಣಾ. ನಾವ್ಯಾರು ಡಿಕೆ ಶಿವಕುಮಾರ್ ರನ್ನ ಪಕ್ಷಕ್ಕೆ ಕರೆದಿಲ್ಲ. ಕೇಂದ್ರದ ನಾಯಕರೇ ಎಲ್ಲ ತೀರ್ಮಾನ ತೆಗೆದುಕೊಳ್ಳುತ್ತಾರೆ’ ಎಂದು ಆರ್.ಅಶೋಕ್ ತಿಳಿಸಿದರು.
Key words: congress, suspend, DK Shivakumar, R. Ashok, challenges