ರನ್ಯಾರಾವ್ ಕೇಸ್ ನಲ್ಲಿ ಸರ್ಕಾರವೇ ಭಾಗಿ: ಪ್ರೋಟೋಕಾಲ್ ದುರ್ಬಳಕೆ ಬಗ್ಗೆ ತನಿಖೆಯಾಗಲಿ- ಆರ್.ಅಶೋಕ್

ಬೆಂಗಳೂರು,ಮಾರ್ಚ್,11,2025 (www.justkannada.in):  ನಟಿ ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಸರ್ಕಾರವೇ ಭಾಗಿಯಾಗಿದೆ.  ಪ್ರೋಟೋಕಾಲ್ ದುರ್ಬಳಕೆ ಬಗ್ಗೆ ತನಿಖೆಯಾಗಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.

ನಟಿ ರನ್ಯಾರಾವ್ ಗೆ ಪ್ರೋಟೋಕಾಲ್ ನೀಡಿದ ವಿಚಾರ  ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್,  ಪೊಲೀಸರ ಜೀಪ್ ನಲ್ಲಿ ರನ್ಯಾರನ್ನ ಕರೆತರುವ ಮಾಹಿತಿ ಇದೆ.  ಪ್ರಕರಣದ ಬಳಿಕವೂ ಪೊಲೀಸ್ ಜೀಪ್ ನಲ್ಲಿ ಕರೆತರಲಾಗಿದೆ. ಹೀಗಾಗಿ ರನ್ಯಾರಾವ್ ಪ್ರಕರಣದಲ್ಲಿ ಸರ್ಕಾರವೇ ಭಾಗಿಯಾಗಿದೆ ಎಂದು ಆರೋಪಿಸಿದರು.

ನಟ ರನ್ಯಾರಾವ್ ಹೇಗೆ ಪ್ರೋಟೊಕಾಲ್ ನೀಡಿದರು. ಪ್ರೋಟೋಕಾಲ್ ದುರ್ಬಳಕೆ  ಬಗ್ಗೆ ತನಿಖೆ ನಡೆಸಲೇಬೇಕು ಎಂದು  ಆರ್ ಅಶೋಕ್ ತಿಳಿಸಿದರು.

Key words: Government, involved, Ranya Rao case, R. Ashok