ಬೆಂಗಳೂರು,ಮಾರ್ಚ್,21,2025 (www.justkannada.in): ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ ಆರೋಪದ ಮೇಲೆ 18 ಬಿಜೆಪಿ ಶಾಸಕರನ್ನ ಸದನದಿಂದ 6 ತಿಂಗಳ ಕಾಲ ಅಮಾನತುಗೊಳಿಸಿದ ಸ್ಪೀಕರ್ ಯು.ಟಿ ಖಾದರ್ ವಿರುದ್ದ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಆರ್.ಅಶೋಕ್, ಸ್ಪೀಕರ್ ಯು.ಟಿ ಖಾದರ್ ಅವರೇ ಪ್ರಜಾಪ್ರಭುತ್ವಕ್ಕೆ ಅವಮಾನಿಸಿದ್ದೀರಿ. ಮಂತ್ರಿ ಅಂಗಲಾಚಿದರೂ ಗೊಂಬೆ ರೀತಿ ಕುಳಿತುಕೊಂಡ್ರಿ. ನಾವು ನ್ಯಾಯ ಕೇಳಿದವು. ಆದರೆ ನಮ್ಮ ಶಾಸಕರನ್ನ ಅಮಾನತು ಮಾಡಿ ಪ್ರಜಾಪ್ರಭುತ್ವದ ವಿರೋಧಿ ನಡೆ ತೋರಿದ್ದೀರಿ ಎಂದು ಕಿಡಿಕಾರಿದರು.
ವಿಧಾನಸಭೆ ಕಲಾಪದಲ್ಲಿ ವಿಪಕ್ಷಗಳು ಧರಣಿ ಮುಂದೆವರೆಸಿದ ಹಿನ್ನೆಲೆ ವಿಧಾನಸಭೆ ಕಲಾಪವನ್ನ ಸ್ಪೀಕರ್ ಯುಟಿ ಖಾದರ್ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಮಾಡಿದರು.
Key words: MLAs, suspension, Speaker, democracy, R. Ashok