ಮುಸ್ಲೀಮರಿಗೆ ಮೀಸಲಾತಿ ವಿಚಾರದಲ್ಲಿ ಹೆಚ್ ಡಿ ದೇವೇಗೌಡರು ಹೋರಾಟ ಮಾಡಬೇಕು- ಆರ್.ಅಶೋಕ್

ಬೆಂಗಳೂರು,ಮಾರ್ಚ್,22,2025 (www.justkannada.in): ಗುತ್ತಿಗೆಯಲ್ಲಿ ಮುಸ್ಲೀಮರಿಗೆ 4% ಮೀಸಲಾತಿ ನೀಡುವ ವಿಧೇಯಕವನ್ನ ಸದನದಲ್ಲಿ ಅಂಗೀಕರಿಸಲಾಗಿದ್ದು ಇದಕ್ಕೆ ಬಿಜೆಪಿ , ಜೆಡಿಎಸ್ ವಿರೋಧ ವ್ಯಕ್ತಪಡಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್, . ಸ್ಪೀಕರ್ ಯುಟಿ ಖಾದರ್ ಮತ್ತು ಸರ್ಕಾರ ಒಡಂಬಡಿಕೆ ಮಾಡಿಕೊಂಡು ಈ ತೀರ್ಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಶಾಸಕರ ಅಮಾನತುಗೊಳಿಸಿರುವ  ಸ್ಪೀಕರ್ ನಿರ್ಧಾರ ಹಿಟ್ಲರ್ ಸಂಸ್ಕೃತಿ ತೋರಿಸುತ್ತೆ.  ಸದನದಲ್ಲಿ ಸ್ಪೀಕರ್ ಪ್ರಚೋದನೆಯಿಂದ ಈ ಘಟನೆಯಾಗಿದೆ . ಸ್ಪೀಕರ್ ಸರ್ಕಾರ ಒಡಂಬಡಿಕೆ ಮಾಡಿಕೊಂಡು ಮುಸ್ಲೀಮರಿಗೆ ಮೀಸಲಾತಿ ತೀರ್ಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

ಮೀಸಲಾತಿ ವಿಚಾರದಲ್ಲಿ ರಾಜ್ಯವ್ಯಾಪಿ ಹೋರಾಟ ಮಾಡುತ್ತೇವೆ. ಹೆಚ್ ಡಿ ದೇವೇಗೌಡರು ಮುಸ್ಲೀಮರಿಗೆ ಮೀಸಲಾತಿ ಕೊಟ್ಟವರು ಶಿಕ್ಷಣ ಉದ್ಯೋಗದಲ್ಲಿ ಮೀಸಲಾತಿ ನೀಡಿದ್ದರು. ಆಗ ಅವರು ನಮ್ಮ ಮೈತ್ರಿ ಆಗಿರಲಿಲ್ಲ. ಮುಸ್ಲೀಮರ ಮೀಸಲಾತಿ ವಿಚಾರದಲ್ಲಿ ಹೆಚ್ ಡಿ ದೇವೇಗೌಡರು ಹೋರಾಟ ಮಾಡಬೇಕು ಎಂದರು.

Key words: HD Deve Gowda, fight, reservation, Muslims, R. Ashok