ರಾಜ್ಯ ಸರ್ಕಾರ ದಿವಾಳಿ: ನೌಕರರಿಗೆ ಸಂಬಳ ಕೊಡಲೂ ಇವರಿಗೆ ದುಡ್ಡಿಲ್ಲ- ಆರ್.ಅಶೋಕ್

ಬೆಂಗಳೂರು,ಏಪ್ರಿಲ್,8,2025 (www.justkannada.in):  ರಾಜ್ಯ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆ. ಸರ್ಕಾರಿ ನೌಕರರಿಗೂ ಸಂಬಳ ಕೊಡಲೂ ಇವರಿಗೆ ದುಡ್ಡಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಹಳೆ ಸಿದ್ದರಾಮಯ್ಯ ಅವರಿಗೂ ಹೊಸ ಸಿದ್ದರಾಮಯ್ಯ ಅವರಿಗೂ ವ್ಯತ್ಯಾಸವಿದೆ. ಸಿದ್ದರಾಮಯ್ಯಗೆ ಮರೆವು ಹೆಚ್ಚಾಗಿದೆ. ಕೇಂದ್ರ ಸರ್ಕಾರ ಯಾಕೆ ನಮಗೆ ಕಪಾಳ ಮೋಕ್ಷ ಮಾಡುತ್ತದೆ.  ಸಂಸದರು ಆಯ್ಕೆಯಾಗಿರುವುದು ಯಾಕೆ? ಸರ್ಕಾರಿ ನೌಕರರಿಗೂ ಸಂಬಳ ಕೊಡಲು ಇವರ ಬಳಿ ದುಡ್ಡಿಲ್ಲ. ಆಸ್ಪತ್ರೆಯಲ್ಲಿ ವೈದ್ಯರಿಗೆ ಎರಡು ತಿಂಗಳಿಗೊಮ್ಮೆ ಸಂಬಳ ನೀಡ್ತಾರೆ.  ಸರ್ಕಾರ ದಿವಾಳಿ ಆಗಿದೆ.  ಸಂಬಳ ಕೊಡುವ ಯೋಗ್ಯತೆ ಇಲ್ಲ. ಸರ್ಕಾರ ಪಾಪರ್ ಆಗಿಲ್ಲ ಅಂದ್ರೆ 15 ಸಾವಿರ ಕೋಟಿ ರೂ. ಸಾಲ ಯಾಕೆ ಮಾಡಿದ್ರಿ. ಸಾಲ ಮಾಡುವುದರಲ್ಲಿ ಸಿದ್ದರಾಮಯ್ಯ ಗಿನ್ನಿಸ್ ರೆಕಾರ್ಡ್ ಮಾಡಿದ್ದಾರೆ ಎಂದು ಹರಿಹಾಯ್ದರು.

ಗ್ಯಾರಂಟಿ ಕೊಟ್ಟು ದೇವಲೋಕ ಸೃಷ್ಟಿಸುವುದಾಗಿ ಹೇಳಿದ್ದರು. ಈಗ  ಗ್ಯಾರಂಟಿಗಳಿಗೆ ಎಷ್ಟು ಬೇಕು ಅಷ್ಟು ತೆರಿಗೆ ಹಾಕಿದ್ದಾರೆ.  ಬೆಲೆ ಏರಿಕೆ ಹಿನ್ನೆಲೆ ಗ್ಯಾರಂಟಿ ಕೊಡುತ್ತಿದ್ದೇವೆ  ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ ಎಂದು ಆರ್ ಅಶೋಕ್ ಕಿಡಿಕಾರಿದರು.

Key words: State government, bankrupt, R. Ashok